ಜಬಲ್ಪೂರದ ಮತ್ತೊಂದು ಪ್ರಮುಖ ಆಕರ್ಷಣೆ. ಇದು ನಗರದಿಂದ 15 ಕಿಮೀ ದೂರದಲ್ಲಿದೆ. ಈ ಕೆರೆ ಮತ್ತು ಇದರ ಸುತ್ತಲಿರುವ ಕಟ್ಟಡಗಳನ್ನು ಗೋಂಡರ ರಾಜ ಸಂಗ್ರಾಮಸಿಂಗ್ 15ನೇ ಶತಮಾನದಲ್ಲಿ ಕಟ್ಟಿಸಿದನಂತೆ. ಈ ಸ್ಥಳವು ಮಧ್ಯಕಾಲೀನ ವಾಸ್ತುಶಿಲ್ಪಕಲೆಯನ್ನು ಬಿಂಬಿಸುತ್ತದೆ. ಈ ಕೆರೆಯು ವಲಸೆ ಹಕ್ಕಿಗಳ ತಾಣವಾಗಿ ಕೂಡ ಜನಪ್ರಿಯವಾಗಿದೆ. ಇಲ್ಲಿಗೆ ಪಿನ್ ಟೈಲ್ಡ್ ಬಾತುಕೋಳಿಗಳು, ಕೋಟ್ಸ್ ಮತ್ತು ರೆಡ್ ಪರ್ಚಡ್ ಪೊಚಾರ್ಡ್ಸ್ ಗಳು ಮಧ್ಯ ಮತ್ತು ಪಶ್ಚಿಮ ಏಷ್ಯಾಗಳಿಂದ ಇಲ್ಲಿಗೆ ವಲಸೆ ಬರುತ್ತವೆ. ಇದೊಂದು ರಮಣೀಯವಾದ ಪ್ರಶಾಂತವಾದ ಸ್ಥಳ. ಛಾಯಾಚಿತ್ರಣ ಕಲೆಯನ್ನು ಇಷ್ಟಪಡುವವರಿಗೆ ಇದೊಂದು ನೆಚ್ಚಿನ ತಾಣ.