Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಗೋಮಟ್‍ಗಿರಿ

ಗೋಮಟ್‍ಗಿರಿ, ಇಂದೋರ್

1

ಗೋಮಟ್‍ಗಿರಿಯು ಬೆಟ್ಟಗಳ ನಡುವೆ ಇರುವ ಪ್ರಾಕೃತಿಕ ಪರಿಸರದ ನಡುವೆ ನೆಲೆಗೊಂಡಿದೆ. ಈ ದೇವಾಲಯವು ಜೈನ ಸಮುದಾಯಕ್ಕೆ ಸೇರಿದುದಾಗಿದೆ. ಈ ದೇವಾಲಯವು ಗೊಮ್ಮಟೇಶ್ವರ ಅಥವಾ ಬಾಹುಬಲಿಯ ಬೃಹತ್ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಈ ವಿಗ್ರಹದ ಎತ್ತರವು 21 ಅಡಿಯಾಗಿದ್ದು, ಶ್ರವಣಬೆಳಗೊಳದ ಗೊಮ್ಮಟೇಶ್ವರನ ವಿಗ್ರಹವನ್ನು ಇದು ಹೋಲುತ್ತದೆ. ಗೋಮಟ್‍ಗಿರಿಯಲ್ಲಿ 24 ತೀರ್ಥಂಕರರಿಗಾಗಿ ನಿರ್ಮಿಸಲಾಗಿರುವ 24 ಅಮೃತಶಿಲೆಯ ದೇವಾಲಯಗಳು ಇವೆ. ಈ ದೇವಾಲಯಗಳು ಎಂತಹವರನ್ನು ಮಂತ್ರಮುಗ್ಧಗೊಳಿಸುತ್ತವೆ.

ಅಮೃತಶಿಲೆಯಲ್ಲಿ ನಿರ್ಮಿಸಲಾಗಿರುವ ಮುಖ್ಯದೇವಾಲಯವು ಶಾಂತಿ ಮತು ಪ್ರಾಕೃತಿಕ ಸೌಂದರ್ಯಕ್ಕೆ ಮತ್ತೊಂದು ಹೆಸರಾಗಿ ನಿಂತಿದೆ. ಹಾಗಾಗಿ ಈ ದೇವಾಲಯವು ಧ್ಯಾನ ಮಾಡಲು ಮತ್ತು ಶಾಂತತೆಯನ್ನು ಆನಂದಿಸಲು ಹೇಳಿ ಮಾಡಿಸಿದ ಜಾಗವಾಗಿದೆ. ಗೊಮಟ್‍ಗಿರಿಯು ವಾರಾಂತ್ಯಗಳಲ್ಲಿ ಕುಟುಂಬದೊಂದಿಗೆ ಪ್ರಶಾಂತತೆಯನ್ನು ಆನಂದಿಸಲು ಇರುವ ಅತ್ಯುತ್ತಮ ಸ್ಥಳವಾಗಿದೆ. ಈ ಸ್ಥಳದಲ್ಲಿ ಪ್ರವಾಸಿಗರಿಗೆ ಬೇಕಾದ ಅತಿಥಿ ಗೃಹ, ಉಪಾಹಾರ ಗೃಹ ಮತ್ತು ಧರ್ಮಶಾಲಾಗಳಂತಹ ಎಲ್ಲ ವ್ಯವಸ್ಥೆಗಳು ಇವೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri