ಇಂಫಾಲ್ ನಲ್ಲಿರುವ ಅನೇಕ ದೇವಾಲಯಗಳು ಪೈಕಿ, ಹನುಮಾನ್ ದೇವಾಲಯ ನಗರದಲ್ಲಿ ಅತ್ಯಂತ ಹೆಚ್ಚಿನದಾಗಿ ಪೂಜಿಸಲ್ಪಡುವ ದೇವಾಲಯಗಳಲ್ಲಿ ಒಂದಾಗಿದೆ. ಮಹಾಬಲಿ ಕಾಡಿನಲ್ಲಿ ಇಂಫಾಲ್ ನದಿ ತೀರದಲ್ಲಿರುವ ಹನುಮಾನ್ ದೇವಾಲಯಒಂದೇ ಕಲ್ಲಿನ ಚಪ್ಪಡಿಯಿಂದ ಕೆತ್ತಲಾಗಿದೆ. ಹನುಮಂತ ದೇವರ ಮಾನವನ ರೂಪ ವಿಗ್ರಹವನ್ನು ಈ ಕಲ್ಲಿನಲ್ಲಿ ಕೆತ್ತಲಾಗಿದೆ.
ಮಣಿಪುರದಲ್ಲಿ ಹೆಚ್ಚಾಗಿ ಪಾಲಿಸಲಾಗುವ ರಾಮನಂದಿ ಪಂಥಕ್ಕೆ ಇಲ್ಲಿನ ಹನುಮಾನ್ ಮಂದಿರ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಸಾಕ್ಷಿಯಾಗಿದೆ. ಒಂದು ಅತ್ಯಂತ ಹಳೆಯ ದೇವಾಲಯವಾದ ಹನುಮಾನ್ ದೇವಾಲಯ ಸುಮಾರು 1725ರಲ್ಲಿ ರಾಜ ಗರೀಬ್ ನಿವಾಜ್ ನಿಂದ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದು ಈ ಸ್ಥಳದಲ್ಲಿ ಕಾಲದಲ್ಲಿ ನಿರ್ಮಿಸಲಾದ ಏಕೈಕ ದೇವಾಲಯ. ದೇವಸ್ಥಾನದವಾಸ್ತುಶಿಲ್ಪ ಒಂದು ಬಂಗಾಳಿ ಶೈಲಿಯ ಗುಮ್ಮಟಾಕಾರದ ಗುಡಿಸಲಿನ ಹೋಲಿಕೆಯನ್ನು ಹೊಂದಿದೆ. ಹನುಮಾನ್ ದೇವಾಲಯ ಮಣಿಪುರದಲ್ಲಿ ಹಿಂದೂ ಧರ್ಮದ ರಾಮನಂದಿ ಆರಾಧನೆಯ ಒಂದು ಐತಿಹಾಸಿಕ ಮತ್ತು ಪುರಾತತ್ತ್ವ ಶಾಸ್ತ್ರದ ಪುರಾವೆಗಳನ್ನು ಒದಗಿಸುತ್ತದೆ.
ಸುತ್ತಮುತ್ತಲಿನ ಕಾಡುಗಳಲ್ಲಿ, ಹಲವಾರು ಕೋತಿಗಳು ಕಂಡುಬರುತ್ತವೆ, ಆದರೆ ಆಶ್ಚರ್ಯಕರ ಸಂಗತಿಯೆಂದರೆ ಈ ಕೋತಿಗಳು ಮಹಾಬಲಿ ಅರಣ್ಯದ ಮಿತಿಯನ್ನು ಎಂದಿಗೂ ದಾಟುವುದಿಲ್ಲ ಮತ್ತು ಯಾವಾಗಲೂ ದೇವಾಲಯದ ಪ್ರದೇಶದಲ್ಲಿಯೇ ಇರುತ್ತವೆ.