Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು » ಪರ್ವತ ವೀಕ್ಷಣಾ ಉದ್ಯಾನ

ಪರ್ವತ ವೀಕ್ಷಣಾ ಉದ್ಯಾನ, ಇಡುಕ್ಕಿ

1

ಜಿಲ್ಲಾ ಕೇಂದ್ರ ಇಡುಕ್ಕಿಯಿಂದ ಕೇವಲ 1.5 ಕಿ.ಮೀ. ದೂರದಲ್ಲಿರುವ ಪರ್ವತ ವೀಕ್ಷಣಾ ಉದ್ಯಾನ ಮೊದಲು ನೀವು ಭೇಟಿ ನೀಡಬೇಕಾದ ಸ್ಥಳ. ಎಂಟು ಎಕರೆಗಳಷ್ಟು ವಿಶಾಲವಾಗಿ ಹಬ್ಬಿಕೊಂಡಿರುವ ಈ ದಿಣ್ಣೆ ತನ್ನ ವಿನ್ಯಾಸ ಹಾಗೂ ಸುತ್ತಲಿನ ಪರಿಸರ ವೀಕ್ಷಣಾ ಅವಕಾಶಗಳಿಂದಾಗಿ ಗಮನಸೆಳೆಯುತ್ತದೆ. ನೈಸರ್ಗಿಕ ಸರೋವರವೂ ಈ ಉದ್ಯಾನದಲ್ಲಿದ್ದು ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಉದ್ಯಾನದ ಹೆಸರೇ ಸೂಚಿಸುವಂತೆ, ಇಲ್ಲಿಂದ ಸುತ್ತಮುತ್ತಲಿನ ಪ್ರದೇಶಗಳ ಸಮ್ಮೋಹನಗೊಳಿಸುವ ಸೊಬಗನ್ನು ಆಸ್ವಾಧಿಸಲು ಅವಕಾಶವಿದೆ. ಯಾವುದೇ ಅಂಜಿಕೆಯಿಲ್ಲದೇ ಆರಾಮಾಗಿ ಓಡಾಡಿಕೊಂಡಿರುವ ಜಿಂಕೆ, ಬೈಸನ್ಸ್ ಮತ್ತು ಕಾಡಾನೆಗಳನ್ನು ಇಲ್ಲಿ ವೀಕ್ಷಿಸಬಹುದು. ಇಲ್ಲಿಯ ಸರೋವರದಲ್ಲಿ ದೋಣಿ ಸವಾರಿಗೂ ಅವಕಾಶ ಕಲ್ಪಿಸಲಾಗಿದ್ದು, ಆ ಮೋಜನ್ನು ಅನುಭವಿಸಬಹುದು. ಗಿಡಮೂಲಿಕೆ ಉದ್ಯಾನ ಈ ಉದ್ಯಾನದ ಮತ್ತೊಂದು ವಿಶೇಷ. ಇಡುಕ್ಕಿಯ ಕಮಾನು ಆಣೆಕಟ್ಟು ಹಾಗೂ ಚೆರುಥೋನಿ ಆಣೆಕಟ್ಟುಗಳ ಸಮೀಪವರ್ತಿ ಸ್ಥಳದಲ್ಲಿ ಈ ವೀಕ್ಷಣಾ ಪ್ರದೇಶ ಇರುವುದರಿಂದ ಪ್ರವಾಸಿಗರಿಗೆ ಹಿನ್ನೀರನ್ನು ವೀಕ್ಷಿಸುವ ಅವಕಶವೂ ಇದೆ. ಆಣೆಕಟ್ಟೆ ಮಟ್ಟದಿಂದ 350 ಅಡಿ ಎತ್ತರದಲ್ಲಿರುವುದರಿಂದ ಹಿತವಾದ ಅನುಭವ ನಿಮ್ಮದಾಗುತ್ತದೆ. ಮಕ್ಕಳಿಗಾಗಿಯೂ ಚಿಚಿಕ್ಕ ಪುಟ್ಟ ಆಟಿಕೆಗಳೂ ಇವೆ. ಇಲ್ಲಿಗೆ ಹೋಗುವಾಗ ಕೆಮರಾ, ದೂರದರ್ಶಕಗಳನ್ನು ಒಯ್ಯಲು ಮರೆಯಬೇಡಿ; ನೆನಪುಗಳನ್ನು ಸೆರೆಹಿಡಿದು ಜಗತ್ತಿಗೇ ಹಂಚಿ!

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat