ಪೈಗಾ ಗುಹೆಗಳು ಪೈಗಾದಲ್ಲಿದ್ದ ರಾಜ ಮನೆತನಗಳಿಗೆ ಸೇರಿದ ಗುಹೆಗಳಾಗಿವೆ. ಈ ಮನೆತನವನ್ನು ಶುಮ್ಸ್ ಉಲ್ ಉಮ್ರಾಹಿ ಮನೆತನವೆಂದು ಕರೆಯಲಾಗುತ್ತಿತ್ತು. ಹೈದರಬಾದಿನ ಪಿಸಲ್ ಬಂಡ ಉಪನಗರದಲ್ಲಿ ನೆಲೆಗೊಂಡಿರುವ ಈ ಗುಹೆಗಳನ್ನು ಮಖ್ಬರ ಶುಮ್ಸ್ ಉಲ್ ಉಮ್ರ ಎಂದು ಸಹ ಕರೆಯುತ್ತಾರೆ. ಇದನ್ನು ನವಾಬ್ ಟೈಗ್ ಜಂಗ್ ಬಹದೂರ್ ರವರು 1787ರಲ್ಲಿ ನಿರ್ಮಾಣ ಮಾಡಲು ಪ್ರಾರಂಭಿಸಿದನು. ಆನಂತರ ಇದನ್ನು ಜಂಗ್ ಬಹದೂರ್ ನ ಮಗನಾದ ಅಮಿರ್ ಇ ಕಬೀರ್ ಪೂರ್ಣಗೊಳಿಸಿದನು. ಈ ಐತಿಹಾಸಿಕ ಗುಹೆಯಲ್ಲಿ ಪೈಗಾ ಮನೆತನದ ಹಲವಾರು ತಲೆಮಾರುಗಳವರನ್ನು ಇಲ್ಲಿ ಸಮಾಧಿ ಮಾಡಲಾಗಿದೆ. ಪೈಗಾ ಗುಹೆಗಳು ತಮ್ಮ ಅನುಪಮ ವಾಸ್ತುಶಿಲ್ಪದ ದೃಷ್ಟಿಯಿಂದ ತುಂಬಾ ಪ್ರಸಿದ್ಧಿಯನ್ನು ಗಳಿಸಿವೆ.
ಏಕೆಂದರೆ ಈ ಗುಹೆಗಳ ವಾಸ್ತುಶಿಲ್ಪಕ್ಕೆ ಸರಿದೂಗುವಂತ ಮತ್ತೊಂದು ರಚನೆ ವಿಶ್ವದಲ್ಲಿ ಎಲ್ಲೂ ಇಲ್ಲ ಎಂಬ ಕೀರ್ತಿಯನ್ನು ಇವು ಪಡೆದಿವೆ. ಈ ಗುಹೆಗಳು ಗ್ರೀಕ್, ಪರ್ಶಿಯನ್,ಮೊಘಲ್, ರಾಜಸ್ಥಾನಿ, ಅಸಫ್ ಜಾಹಿ ಮತ್ತು ದಖನ್ ವಾಸ್ತುಶಿಲ್ಪದ ಸಂಯೋಜನೆಯನ್ನು ಹೊಂದಿದ್ದು, ನಯವಾದ ಗಾರೆಯಿಂದ ನಿರ್ಮಾಣಗೊಂಡಿದೆ. ಈ ಗುಹೆಗಳು ಅಂದಿನ ಕಾಲದ ಸರಿಸಾಟಿಯಿಲ್ಲದ ವಾಸ್ತು ಮತ್ತು ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿ ನಿಂತಿವೆ. ಇದರ ಒಳಗಡೆ ಅಳವಡಿಸಲಾಗಿರುವ ಅಮೃತಶಿಲೆಯು (ಆನಂತರದ ಕಾಲದಲ್ಲಿ ಅಳವಡಿಸಲಾದದ್ದು) ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತವೆ.