Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಮೆಕ್ಕಾ ಮಸೀದಿ

ಮೆಕ್ಕಾ ಮಸೀದಿ, ಹೈದರಾಬಾದ್

3

ಮೆಕ್ಕಾ ಮಸೀದಿಯು ಹೈದರಬಾದಿನ ಹಳೆಯ ಮಸೀದಿಯೆಂದಷ್ಟೇ ಅಲ್ಲದೆ ದೇಶದ ಅತ್ಯಂತ ದೊಡ್ಡ ಮಸೀದಿಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಮಸೀದಿಯನ್ನು ಮುಸಲ್ಮಾನರ ಧಾರ್ಮಿಕ ಕೇಂದ್ರವಾಗಿಯಷ್ಟೇ ಅಲ್ಲದೆ, ಐತಿಹಾಸಿಕ ಮಹತ್ವದಿಂದಲು ಮತ್ತು ಪಾರಂಪರಿಕ ಕಟ್ಟಡ ಎಂಬ ದೃಷ್ಟಿಯಿಂದಲು ರಾಜ್ಯ ಸರ್ಕಾರವು ಇದನ್ನು ತನ್ನ ನಿರ್ವಹಣೆಯಲ್ಲಿ ಇರಿಸಿಕೊಂಡಿದೆ.

ಈ ಮಸೀದಿಯು ಚಾರ್ ಮಿನಾರ್ ಮತ್ತು ಚೌಮಹಲ್ಲ ಅರಮನೆಯಂತಹ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಮಹಮ್ಮದ್ ಖುಲಿ ಖುತುಬ್ ಷಾಹ್ ಈ ಮಸೀದಿಯನ್ನು 16 ನೇ ಶತಮಾನದಲ್ಲಿ ಕಟ್ಟಲು ಪ್ರಾರಂಭಿಸಿದನು. ಈ ಮಸೀದಿಯನ್ನು ಕಟ್ಟಲು ಬಳಸಿದ ಇಟ್ಟಿಗೆಗಳಿಗೆ ಮಣ್ಣನ್ನು ಮೆಕ್ಕಾದಿಂದ ತರಲಾಯಿತಂತೆ. ಈ ಇಟ್ಟಿಗೆಗಳನ್ನು ಇಲ್ಲಿನ ಕೇಂದ್ರಭಾಗದ ಕಮಾನು ಕಟ್ಟಲು ಬಳಸಲಾಗಿದೆ. ಈ ಮಸೀದಿಯು ಖುಲಿ ಖುತುಬ್ ಷಾಹ್ ಸ್ಥಾಪಿಸಿದ ಸಾಮ್ರಾಜ್ಯದ ಅಕ್ಷರಶಃ ಕೇಂದ್ರ ಭಾಗದಲ್ಲಿ ನೆಲೆಗೊಂಡಿದೆ. ಈ ಮಸೀದಿಯ ಕುರಿತಾಗಿ ಮತ್ತೂ ಆಸಕ್ತಿ ಕೆರಳಿಸುವ ಸಂಗತಿಯೆಂದರೆ ಇದರ ಆವರಣದಲ್ಲಿರುವ ಕೋಣೆ. ನಂಬಿಕೆಗಳ ಪ್ರಕಾರ ಈ ಕೋಣೆಯಲ್ಲಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್‍ರ ಕೂದಲನ್ನು ಸಂರಕ್ಷಿಸಿ ಇಡಲಾಗಿದೆಯಂತೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat