Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಲುಂಬಿಣಿ ಪಾರ್ಕ್

ಲುಂಬಿಣಿ ಪಾರ್ಕ್, ಹೈದರಾಬಾದ್

3

ಲುಂಬಿಣಿ ಪಾರ್ಕ್ ಹೈದರಬಾದಿನ ಹುಸೇನ್ ಸಾಗರ್ ಪಕ್ಕದಲ್ಲಿಯೆ ನೆಲೆಗೊಂಡಿದೆ. ಈ ಉದ್ಯಾನವನವು ಹೈದರಬಾದಿನ ಹೃದಯಭಾಗದಲ್ಲಿರುವುದರಿಂದಾಗಿ ಮತ್ತು ಇನ್ನಿತರ ಪ್ರವಾಸಿ ಆಕರ್ಷಣೆಗಳಿಗೆ ಸಮೀಪದಲ್ಲಿರುವುದರಿಂದಾಗಿ ಅತ್ಯಂತ ಜನಾಕರ್ಷಕವಾದ ಉದ್ಯಾನವಾಗಿ ಗಮನಸೆಳೆಯುತ್ತಿದೆ. ಈ ಉದ್ಯಾನವನವನ್ನು 1994ರಲ್ಲಿ ನಿರ್ಮಿಸಲಾಯಿತು. ಅಲ್ಲಿಂದ ಈ ಉದ್ಯಾನವನವನ್ನು ವಿವಿಧ ವಯೋ ವರ್ಗದ ಜನರು ನೋಡಿ ತಣಿಯಲು ಅನುಕೂಲವಾಗುವಂತೆ, ಆಗಾಗ್ಗೆ ಪುನರ್ ನಿರ್ಮಾಣ ಮತ್ತು ಬದಲಾವಣೆ ಕಾರ್ಯಗಳನ್ನು ನಡೆಸುತ್ತಲೆ ಬರಲಾಗುತ್ತಿದೆ. ಪ್ರಸ್ತುತ ಲುಂಬಿಣಿ ಪಾರ್ಕ್‍ನಲ್ಲಿ ರಂಗಮಂದಿರ, ದೋಣಿ ವಿಹಾರ ಸೌಲಭ್ಯ, ಸುವ್ಯವಸ್ಥಿತ ಉದ್ಯಾನವನಗಳು ಮತ್ತು ಸಂಗೀತ ಕಾರಂಜಿಗಳನ್ನು ಕಾಣಬಹುದು. ಈ ಎಲ್ಲ ಅಂಶಗಳು ಕೌಟುಂಬಿಕ ವಿಹಾರಕ್ಕೆ ಬರುವವರಿಗೆ ಮತ್ತು ಮೋಜು ಮಾಡಲು ಸೇರುವ ಮಂದಿಗೆ ಹೇಳಿ ಮಾಡಿಸಿದ ತಾಣವನ್ನಾಗಿಸಿವೆ.

ಇಲ್ಲಿರುವ ಲೇಸರ್ ರಂಗಮಂದಿರವು ( ಆಡಿಟೋರಿಯಂ) ಈ ಪ್ರಕಾರದಲ್ಲಿ ದೇಶದಲ್ಲೆ ಪ್ರಥಮ ಎಂಬ ಖ್ಯಾತಿಗೆ ಪಾತ್ರವಾಗಿದ್ದು, 2000 ಜನರು ಕೂರುವ ವ್ಯವಸ್ಥೆಯನ್ನು ಹೊಂದಿದೆ. ಹೈದರಬಾದ್ ಈಗ ಗಳಿಸಿರುವ ವಿಶ್ವನಗರವೆಂಬ ಕೀರ್ತಿಯನ್ನು ಉಳಿಸಿಕೊಂಡು ಹೋಗುವ ಉದ್ದೇಶವೆ ಈ ರಂಗಮಂದಿರವನ್ನು ಸ್ಥಾಪಿಸಲು ಮೂಲಕಾರಣವಾಗಿದೆ. ಈ ರಂಗಮಂದಿರದಲ್ಲಿ ಪ್ರತಿನಿತ್ಯವು ಹೈದರಬಾದಿನ ಇತಿಹಾಸದ ಕುರಿತಾಗಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ನಡೆಯುವ ಲೇಸರ್ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu