ಐಮ್ಯಾಕ್ಸ್ ಥಿಯೇಟರ್ ಅಥವಾ ಪ್ರಸಾದ್ ಐಮ್ಯಾಕ್ಸ್ ಥಿಯೇಟರ್ ಎಂಬುದು ಹೈದರಬಾದಿನಲ್ಲಿ ಇರುವ ಒಂದು ಸಿನಿಮಾ ಥಿಯೇಟರ್ ಆಗಿದ್ದು, ಈ ಪ್ರಕಾರದಲ್ಲಿ ಇದು ಪ್ರಪ್ರಥಮ ಥಿಯೇಟರ್ ಎಂದು ಗುರುತಿಸಲ್ಪಟ್ಟಿದೆ. ಈ ಥಿಯೇಟರ್ ಅನ್ನು ಇಲ್ಲಿನ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಮನೋರಂಜನೆಯನ್ನು ಒದಗಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಐಮ್ಯಾಕ್ಸ್ ಎಂಬುದು ಹಲವಾರು ತೆರೆಗಳನ್ನು ಹೊಂದಿರುವ ಚಿತ್ರಮಂದಿರವಾಗಿದ್ದು, ಏಕಕಾಲದಲ್ಲಿ ಹಲವು ಚಿತ್ರಗಳನ್ನು ಪ್ರದರ್ಶಿಸುತ್ತಿರುತ್ತದೆ. ಇಲ್ಲಿ ಸ್ಪಷ್ಟ ಚಿತ್ರ ಮತ್ತು ಸುಖಾಸೀನ ಆಸನಗಳು ಚಿತ್ರ ನೋಡುವ ಸರಿಸಾಟಿಯಿಲ್ಲದ ಅನುಭವವನ್ನೊದಗಿಸುತ್ತದೆ.
ಇಲ್ಲಿನ ಒಟ್ಟಾರೆ ಅನುಭವವು ನಿಮಗೆ ಎಲ್ಲೂ ಕೂಡ ದೊರೆಯಲಾರದು. ಈ ಸಂಕೀರ್ಣವು ಒಂದು ಉಪಾಹರಗೃಹವನ್ನು ಹೊಂದಿದ್ದು, ನಿಮ್ಮ ಬಾಯಿ ಚಪಲವನ್ನು ತೀರಿಸಿಕೊಳ್ಳಲು ಇದು ಉತ್ತಮವಾದ ಸ್ಥಳವಾಗಿದೆ. ಇಲ್ಲಿ ವಿಭಿನ್ನ ಶ್ರೇಣಿಯ ಉಪಾಹರಗಳನ್ನು ಕಾಣಬಹುದು. ವ್ಯಾಪಾರ ಮಾಡಲು ಇಚ್ಛಿಸುವವರಿಗೆ ಐಮ್ಯಾಕ್ಸ್ ನಲ್ಲಿ ಹಲವು ಬಗೆಯ, ವಿನ್ಯಾಸಗಳ ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್ಗಳ ಅಂಗಡಿಗಳನ್ನು ನಾವು ಇಲ್ಲಿ ನೋಡಬಹುದು. ಸಾಹಸಿ ಮನೋಭಾವವನ್ನು ಹೊಂದಿರುವವರು ಇಲ್ಲಿ ಮುಷ್ಟಿ ಯುದ್ಧ ಮತ್ತು ಇನ್ನಿತರ ಸಾಹಸ ಚಟುವಟಿಕೆಗಳನ್ನು ಪ್ರಯತ್ನಿಸಬಹುದು. ಅಲ್ಲದೆ ಇಲ್ಲಿರುವ ಭೂತ ಬಂಗಲೆಯಲ್ಲಿ ಒಂದು ಸುತ್ತು ಹೊಡೆಯಬಹುದು. ಈ ಎಲ್ಲ ದೃಷ್ಟಿಯಿಂದ ಐಮ್ಯಾಕ್ಸ್ ನಿಜಕ್ಕು ನೋಡಲೆ ಬೇಕಾದ ತಾಣವಾಗಿದೆ.