Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಚೌಮೊಹಲ್ಲ ಅರಮನೆ

ಚೌಮೊಹಲ್ಲ ಅರಮನೆ, ಹೈದರಾಬಾದ್

5

ಚೌಮೊಹಲ್ಲ ಅರಮನೆಯು ಹೈದರಬಾದಿನ ನಿಜಾಮರಿಗೆ ಸೇರಿದ್ದಾಗಿದ್ದು, ಅಸಫ್ ಜಾಹಿಯ ಅಧಿಕೃತ ನಿವಾಸವಾಗಿ ಸೇವೆ ಸಲ್ಲಿಸಿತ್ತು. ಈ ಅರಮನೆಯ ಹೆಸರು ’ಚಹರ್’ ಮತ್ತು ’ ಮಹಲತ್’ ಎಂಬ ಪರ್ಷಿಯನ್ ಹೆಸರುಗಳಿಂದ ಉತ್ಪತಿಯಾಗಿದೆ. ಈ ಅರಮನೆಯನ್ನು ಇರಾನಿ ಷಾಹ್ ರವರ ಅರಮನೆಯನ್ನು ಹೋಲುವಂತೆ ನಿರ್ಮಿಸಲಾಗಿದೆ. ಈ ಅರಮನೆಯ ನಿರ್ಮಾಣವು 18ನೇ ಶತಮಾನದಲ್ಲಿ ಪ್ರಾರಂಭಗೊಂಡಿತು. ಇದು ಸಂಪೂರ್ಣಗೊಳ್ಳಲು ಸರಿಸುಮಾರು 10 ವರ್ಷಗಳ ಕಾಲ ಹಿಡಿಯಿತು. ಈ ಅರಮನೆಯ ವಿನ್ಯಾಸ ಮತ್ತು ಶೈಲಿಯಲ್ಲಿ ಹಲವಾರು ಮಿಶ್ರ ಶೈಲಿಗಳ ಪ್ರಭಾವಗಳನ್ನು ಕಾಣಬಹುದಾಗಿದೆ.

ಹಿಂದಿನ ಕಾಲದಲ್ಲಿ ಈ ಅರಮನೆಯಲ್ಲಿ ಹಲವಾರು ಚಟುವಟಿಕೆಗಳು ನಡೆಯುತ್ತಿದ್ದವು. ಅವುಗಳಲ್ಲಿ ನಿಜಾಮರ ಪಟ್ಟಾಭಿಷೇಕ, ಗವರ್ನರ್ ಜನರಲ್‍ಗಳಿಗೆ ಸ್ವಾಗತ ಕೂಟ ಮುಂತಾದವು ಪ್ರಮುಖವಾದುದಾಗಿವೆ. ಅಲ್ಲದೆ ನಿಜಾಮರ ಕಾಲದಲ್ಲಿ ಎಲ್ಲ ಪ್ರಮುಖ ಸಮಾರಂಭಗಳೆಲ್ಲವು ಚೌಮೊಹಲ್ಲ ಅರಮನೆಯಲ್ಲಿಯೆ ನಡೆಯುತ್ತಿತ್ತು. ಈ ಅರಮನೆಯಲ್ಲಿ ಎರಡು ಸಭಾಂಗಣಗಳಿವೆ. ಒಂದು ಉತ್ತರ ಸಭಾಂಗಣ, ಇನ್ನೊಂದು ದಕ್ಷಿಣ ಸಭಾಂಗಣ. ಈ ಎಲ್ಲ ಸಭಾಂಗಣಗಳು ವಿನ್ಯಾಸದಲ್ಲಿ ಹೋಲಿಕೆಯಲ್ಲದ ಕೋಣೆಗಳನ್ನು ಹೊಂದಿವೆ. ಈ ಅರಮನೆಯು ಭವ್ಯತೆಯಲ್ಲಿ ಮತ್ತು ಸೊಬಗಿನಲ್ಲಿ ಅನುಪಮತೆಯನ್ನು ಹೊಂದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat