Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಬಿರ್ಲಾ ಮಂದಿರ್

ಬಿರ್ಲಾ ಮಂದಿರ್, ಹೈದರಾಬಾದ್

8

ಬಿರ್ಲಾ ಮಂದಿರವು ಹೈದರಬಾದಿನ ಬಿರ್ಲಾ ತಾರಾಲಯಕ್ಕೆ ಹೊಂದಿಕೊಂಡಂತೆ ಇದೆ. ಈ ಮಂದಿರವನ್ನು ನೌಬತ್ ಪಹಾಡ್ ಎಂದು ಕರೆಯಲಾಗುವ ಸ್ಥಳದಲ್ಲಿ ನೆಲೆಗೊಂಡಿದೆ. ಈ ಮಂದಿರವು ಹಿಂದೂಗಳು ಅತ್ಯಂತ ಭಕ್ತಿ ಭಾವದಿಂದ ಪೂಜಿಸಲ್ಪಡುವ ವೆಂಕಟೇಶ್ವರ ಸ್ವಾಮಿಯ ದೇವಾಲಯವಾಗಿದೆ.

ಈ ದೇವಾಲಯವನ್ನು ಕಟ್ಟಲು 10 ವರ್ಷಗಳ ಕಾಲ ಹಿಡಿಯಿತು. ಇದರ ನಿರ್ಮಾಣದ ಜವಾಬ್ದಾರಿಯ ನೇತೃತ್ವವನ್ನು ರಾಮಕೃಷ್ಣಾಶ್ರಮದ ಸ್ವಾಮಿ ರಂಗನಾಥಾನಂದರು ವಹಿಸಿದ್ದರು. ರಾಜಸ್ಥಾನದಿಂದ ತರಲಾದ ಬಿಳಿಯ ಅಮೃತಶಿಲೆಯ ಕಲ್ಲುಗಳಿಂದ ನಿರ್ಮಿಸಲಾಗಿರುವ ಈ ದೇವಾಲಯವು ಅನುಪಮವಾದ ಸೌಂದರ್ಯವನ್ನು ಒಳಗೊಂಡಿದೆ. ಅಲ್ಲದೆ ಈ ಮಂದಿರದಲ್ಲಿ ಘಂಟೆಗಳನ್ನು ಅಳವಡಿಸಿಲ್ಲ. ಧ್ಯಾನದ ವಾತಾವರಣ ಇಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಇಲ್ಲಿ ಧ್ಯಾನ ಮಗ್ನರಾಗಲು ಬಯಸುವವರಿಗೆ ಯಾವುದೇ ಅಡಚಣೆಗಳಾಗುವುದಿಲ್ಲ. ಮುಖ್ಯ ದೇವರಾದ ವೆಂಕಟೇಶ್ವರ ಸ್ವಾಮಿಯೊಂದಿಗೆ ಇನ್ನಿತರ ದೇವರುಗಳನ್ನು ಸಹ ನಾವು ಇಲ್ಲಿ ಕಾಣಬಹುದು. ಈ ಮಂದಿರವು ಶಿವ, ಗಣೇಶ, ಹನುಮಾನ್, ಬ್ರಹ್ಮ, ಸಾಯಿಬಾಬ, ಶಕ್ತಿ, ಲಕ್ಷ್ಮೀ ಮತ್ತು ಸರಸ್ವತಿಯರಿಗಾಗಿ ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ. ಅಲ್ಲದೆ ಗುರು ಗೋವಿಂದ್ ಸಿಂಗ್‍ರ ಪವಿತ್ರ ಬೋಧನೆಗಳನ್ನು ಸಹ ಈ ದೇವಾಲಯದ ಗೋಡೆಗಳ ಮೇಲೆ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri