Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಆಂಧ್ರ ಪ್ರದೇಶ್ ರಾಜ್ಯ ವಸ್ತು ಸಂಗ್ರಹಾಲಯ

ಆಂಧ್ರ ಪ್ರದೇಶ್ ರಾಜ್ಯ ವಸ್ತು ಸಂಗ್ರಹಾಲಯ, ಹೈದರಾಬಾದ್

2

ಆಂಧ್ರ ಪ್ರದೇಶ್ ರಾಜ್ಯ ವಸ್ತು ಸಂಗ್ರಹಾಲಯವು ಹೈದರಬಾದಿನ ಮೂರನೆ ನಿಜಾಮನಿಂದ ಸ್ಥಾಪನೆಗೊಂಡಿತು. ಈ ವಸ್ತು ಸಂಗ್ರಹಾಲಯವು ಈ ನಗರದ ಶ್ರೀಮಂತ ಮತ್ತು ಅತ್ಯಾಕರ್ಷಕವಾದ ಇತಿಹಾಸದ ಕುರಿತಾಗಿ ಹಲವು ಒಳನೋಟಗಳನ್ನು ಒದಗಿಸುತ್ತದೆ. ಈ ಸಂಗ್ರಹಾಲಯವು 1928 ರಲ್ಲಿ ಪ್ರಾರಂಭಗೊಂಡಿತು. ಇದರ ಕಟ್ಟಡವು ಇಂಡೋ- ಸಾರ್ಸೇನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಆ ಕಾಲದ ಕಲಾ ನೈಪುಣ್ಯದ ಕುರಿತಾಗಿ ಹಲವಾರು ನಿದರ್ಶನಗಳನ್ನು ಒದಗಿಸುತ್ತದೆ. ಈ ಸಂಗ್ರಹಾಲಯವನ್ನು ಸಾರ್ವಜನಿಕ ಉದ್ಯಾನವನದ ಒಳಗಡೆ ನಿರ್ಮಿಸಲಾಗಿದ್ದು, ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಭೇಟಿನೀಡುತ್ತಿರುತ್ತಾರೆ.

ರಾಜ್ಯ ವಸ್ತು ಸಂಗ್ರಹಾಲಯವು ಒಂದು ಪ್ರದರ್ಶನ ಶಾಲೆಯನ್ನು ಹೊಂದಿದೆ. ಇದು ಬುದ್ಧ ಮತ್ತು ಅವನ ಅನುಯಾಯಿಗಳ ಜೀವನ ಚರಿತ್ರೆಯನ್ನು ವೀಕ್ಷಕರಿಗೆ ತೋರಿಸುತ್ತಿದೆ. ಅಲ್ಲ ದೆ ಇಲ್ಲಿ ಅಸಂಖ್ಯಾತ ಪ್ರಾಚೀನ ಕಲಾವಸ್ತುಗಳು ಇವೆ. ಅವುಗಳಲ್ಲಿ ಬಹುಪಾಲು ವಸ್ತುಗಳು ಸ್ವಾಮಿ ಬುದ್ಧನಿಗೆ ಸೇರಲ್ಪಟ್ಟವು ಎಂದು ಭಾವಿಸಲಾಗಿದೆ. ಈ ಸಂಗ್ರಹಾಲಯವು ಅನೇಕ ಕೊಠಡಿಗಳನ್ನು ಹೊಂದಿದೆ. ಪ್ರತಿಯೊಂದು ಕೊಠಡಿಗಳು ಮಾನವನ ನಾಗರೀಕತೆಯ ಹಲವಾರು ಹಂತಗಳನ್ನು ಪರಿಚಯಿಸುತ್ತದೆ. ಪ್ರತಿ ಕೊಠಡಿಯಲ್ಲಿಯು ನಿರ್ದಿಷ್ಟವಾಗಿ ಆಯಾಕಾಲದ ಹಲವಾರು ವಸ್ತುಗಳನ್ನು ಸಂಗ್ರಹಿಸಿ, ಜತನದಿಂದ ಸಂರಕ್ಷಿಸಿಡಲಾಗಿದೆ. ಇದರೊಂದಿಗೆ ಹಿಂದೂ ಮತ್ತು ಜೈನಧರ್ಮಗಳಿಗೆ ಸಂಬಂಧಿಸಿದ ಪ್ರದರ್ಶನ ಕೊಠಡಿಗಳನ್ನು ನಾವು ಇಲ್ಲಿ ಕಾಣಬಹುದು. ಈ ಪ್ರದರ್ಶನ ಶಾಲೆಗಳು ಈ ಧರ್ಮಗಳು ಕಾಲದ ಜೊತೆಗೆ ಹೇಗೆ ಬೆಳವಣಿಗೆ ಹೊಂದಿದವು ಎಂದು ವಿವರಿಸುತ್ತವೆ. ಅಲ್ಲದೆ ಧಾರ್ಮಿಕವಾಗಿ ಮಹತ್ವವನ್ನು ಪಡೆದಿರುವ ವಸ್ತುಗಳನ್ನು ಸಹ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat