Search
  • Follow NativePlanet
Share

ಹೌರಾ : ಪರಂಪರೆ ಮತ್ತು ಹೊಸತನದ ಸಮ್ಮಿಶ್ರಣ

57

ಭಾರತದಲ್ಲಿನ ಹೆಚ್ಚಿನ ಮಹಾನಗರಗಳಲ್ಲಿ ಮೊಳಕೆಯೊಡೆಯುತ್ತಿರುವ ಅವಳಿ ನಗರಗಳಂತೆ, ಪಶ್ಚಿಮ ಬಂಗಾಳದಲ್ಲಿರುವ ಹೌರಾ ಕೂಡಾ ಕೋಲ್ಕತ್ತಾದ ಅವಳಿ ನಗರವಾಗಿದೆ. ಕೈಗಾರಿಕಾ ಪ್ರದೇಶ ಎನ್ನವುದಕ್ಕಿಂತಲೂ ಹೆಚ್ಚು, ಹೌರಾವನ್ನು ಇತರ ಸ್ಥಳಗಳಿಗಿನ್ದ ವಿಭಿನ್ನವಾಗಿಡುವ ಸಂಗತಿಯೆಂದರೆ, ಈ ನಗರದ ಗಾಳಿ ಹಾಗೂ ಮನೋಭಾವದಲ್ಲಿರುವ ಶುದ್ಧ ಪ್ರಣಯ.

ಹೌರಾ ಕೊಲ್ಕತ್ತದೊಂದಿಗೆ ನಾಲ್ಕು ಸೇತುವೆಗಳಾದ - ವಿವೇಕಾನಂದ, ವಿದ್ಯಾಸಾಗರ್, ಖ್ಯಾತ ಹೌರಾ ಹಾಗೂ ನಿವೇದಿತ - ಮೂಲಕ ಸಂಪರ್ಕ ಹೊಂದಿದೆ. ಈ ಯಾವುದೇ ಸೇತುವೆ ಮೂಲಕ ವಾಯುವಿಹಾರ ನಡೆಸುವ ಅನುಭವ ಅದ್ಭುತವಾಗಿದ್ದು, ಇಲ್ಲಿಂದ ಕಾಣಸಿಗುವ ಗಂಗಾ ನದಿಯ ಹಾಗೂ ಅದರಲ್ಲಿ ತೇಲಾಡುವ ಹಡಗುಗಳು ಹಾಗೂ ಹಾಯಿದೊಣಿಗಳ ದೃಶ್ಯ ನಿಜಕ್ಕೂ ಮನಸೂರೆಗೊಳ್ಳುವಂತಹದ್ದು.

ಇವೆಲ್ಲಕ್ಕಿಂತಲೂ ಮುಖ್ಯ ಅಂಶವೆಂದರೆ, ಈ ನಾಲ್ಕೂ ಸೇತುವೆಗಳು ಅದರದ್ದೇ ಆದ ವಿಶೇಷತೆಗಳನ್ನು ಹೊಂದಿವೆ. ವಿದ್ಯಾಸಾಗರ್ ಬ್ರಿಜ್ ಅಥವಾ ಸೇತು, ತೂಗು ಸೇತುವೆಯಾಗಿದ್ದು, ಇದು ವೈಭವ ಹಾಗೂ ಎತ್ತರಕ್ಕೆ ಪ್ರಸಿದ್ದವಾದರೆ, ಹೌರಾ ಬ್ರಿಜ್ ಸಂಕೀರ್ಣವಾದ ಕ್ಯಾಂಟಿಲಿವರ್ ಸೇತುವೆಯಾಗಿದೆ.

ಹೌರಾದ ಸುತ್ತಲಿನ ಆಕರ್ಷಣೆಗಳು

ಬಟಾನಿಕಲ್ ಗಾರ್ಡನ್ಸ್ ಅಥವಾ ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬಟಾನಿಕ್ ಗಾರ್ಡನ್ ಹೌರಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಶಿಬಪುರ್ ನಲ್ಲಿರುವ ಈ ಉದ್ಯಾನವನ 109 ಹೆಕ್ಟರ್ ಗಿಂತಲೂ ಹೆಚ್ಚು ವಿಸ್ತಾರವಾಗಿದ್ದು, 12,000 ಕ್ಕೂ ಅಧಿಕ ಸಸ್ಯ ತಳಿಗಳನ್ನು ಹೊಂದಿದೆ.

ಪ್ರಪಂಚದಲ್ಲೇ ಅತಿ ದೊಡ್ಡ ಆಲದ ಮರ ಎಂದು ನಂಬಲಾಗುವ ದಿ ಗ್ರೇಟ್ ಬಾನ್ಯನ್ ಟ್ರೀ, ಇದರ ಮೇಲಿನ ಆವರಣ ಹಲವಾರು ಸ್ಥಳಗಳಿಗೆ ಹೊದಿಕೆಯಂತಿದೆ. ಸಂತ್ರಗ್ಚ್ಚಿ ಝೀಲ್ ಅಥವಾ ಕೆರೆ, ವಲಸೆ ಹಕ್ಕಿಗಳ ಮನೆಯಾಗಿದ್ದು, ಛಾಯಾಚಿತ್ರಗ್ರಾಹಕರ ನೆಚ್ಚಿನ ತಾಣವಾಗಿದೆ.

ಹೌರಾ ಬ್ರಿಜ್ ತನ್ನ ಮನಸೂರೆಗೊಳ್ಳುವ ಸೌಂದರ್ಯದಿಂದ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ. ಇದು ಹೌರಾ ಹಾಗೂ ಕೋಲ್ಕತ್ತಾ ಸಂಪಕಿಸುತ್ತದೆ ಹಾಗೂ ಇದನ್ನು ಹೂಗ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ವಿದ್ಯಾಸಾಗರ್ ಬ್ರಿಜ್ ಅಥವಾ ಎರಡನೇ ಹೂಗ್ಲಿ ಸೇತುವೆ ಕೂಡಾ ಈ ಎರಡು ನಗರಗಳ ಕೊಂಡಿಯಾಗಿದೆ. ಅವನಿ ರಿವರ್ ಸೈಡ್ ಮಾಲ್ ಹೂಗ್ಲಿ ನದಿಯ ತೀರದಲ್ಲಿದ್ದು, ಇದು ಹೌರಾ ನಿವಾಸಿಗಳ ಮನೋರಂಜನಾ ಕೇಂದ್ರವಾಗಿದೆ.

ಆಹಾರ ಮತ್ತು ಹಬ್ಬಗಳು

ದುರ್ಗಾ ಪೂಜೆಯ ಸಮಯದಲ್ಲಿ ಹೌರಾಕ್ಕೆ ಭೇಟಿ ನೀಡುವುದು ಉತ್ತಮ. ಈ ಹಬ್ಬದ ಆಚರಣೆಯ ವೈಭವವನ್ನು ಹೇಳಲೇಬೇಕು. ದಸರಾ ಹಾಗೂ ಕಾಳಿ ಪೂಜೆಯ ಜೊತೆಗೆ ಆಚರಿಸುವ ದುರ್ಗಾ ಪೂಜೆ, ನಂತರ ಆಚರಿಸುವ ದೀಪಾವಳಿ ಇತ್ಯಾದಿ ಹಬ್ಬಗಳು ಇಲ್ಲಿನ ಕೆಲವು ಮುಖ್ಯ ಹಬ್ಬಗಳಾಗಿವೆ.

ಈ ಸಮಯದಲ್ಲಿ ಬಂಗಾಳಿ ಮಿಠಾಯಿಗಳನ್ನು ಹೇರಳವಾಗಿ ತಯಾರಿಸಲಾಗುತ್ತಿದ್ದು, ದೇಶಾದ್ಯಂತ ಇವುಗಳು ಪ್ರಸಿದ್ಧವಾಗಿವೆ. ಸಂದೇಶ್ ಮತ್ತು ರಸ್ ಮಲೈ ನಗರಾದ್ಯಂತ ದೊರೆಯುವ ಸಿಹಿತಿಂಡಿಗಳಲ್ಲಿ ಕೆಲವು. ರಾಮ ನವಮಿಯ ಸಮಯದಲ್ಲಿ ರಾಮರಾಜತಲ ದೇವಸ್ಥಾನವು ಭಕ್ತಾದಿಗಳಿಂದ ತುಂಬಿರುತ್ತದೆ.

ಪ್ರಕೃತಿ ಸೌಂದರ್ಯ, ಶಾಪಿಂಗ್ ಕೇಂದ್ರ, ಕೈಗಾರಿಕಾ ನಗರ ಇವುಗಳ ಹೊರತಾಗಿ ಹೌರಾ, ಹಲವು ಶೈಕ್ಷಣಿಕ ಕೇಂದ್ರವನ್ನೂ ಹೊಂದಿದೆ. ರಾಜ್ಯದ ನಾನಾಭಾಗಗಳಿಂದ ವಿದ್ಯಾರ್ಥಿಗಳು ತಮ್ಮ ಉನ್ನತ ಹಾಗೂ ವಿಶ್ವವಿದ್ಯಾಲಯದ ಶಿಕ್ಷಣ ಪಡೆಯಲು ಹೌರಾಗೆ ಬರುತ್ತಾರೆ. ಇದರಿಂದ ಇಲ್ಲಿ ಬಹಳ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ.

ರಾಮಕೃಷ್ಣ ಮಿಷನ್ ವಿದ್ಯಾಮಂದಿರ ಹಾಗೂ ಬಂಗಾಳ ಇಂಜಿನಿಯರಿಂಗ್ ಆಂಡ್ ಸೈನ್ಸ್ ಯೂನಿವರ್ಸಿಟಿ ಇಲ್ಲಿನ ಎರಡು ಮುಖ್ಯ ವಿಶ್ವವಿದ್ಯಾನಿಲಯಗಳಾಗಿವೆ. ಇದರ ಹೊರತಾಗಿ ಇಲ್ಲಿರುವ ಡಾನ್ ಬಾಸ್ಕೋ ಹೈ ಸ್ಕೂಲ್ ದೇಶದಲ್ಲೇ ಉತ್ತಮ ವಿದ್ಯಾಭ್ಯಾಸ ಸಂಸ್ಥೆಗಳಲ್ಲಿ ಒಂದಾಗಿದೆ.

ಹೌರಾದಲ್ಲಿ ಪ್ರತಿಯೊಬ್ಬರಿಗೂ ನೋಡುವಂತಹ ಸ್ಥಳಗಳಿವೆ. ನೀವು ಎಷ್ಟೇ ಪ್ರಾಯದವರಾಗಿರಿ, ಈ ನಗರದಲ್ಲಿ ಒಂದು ದಿನ ಅಡ್ಡಾಡಿದರೆ ಇಲ್ಲಿನ ಬಗ್ಗೆ ಬಹಳಷ್ಟು ತಿಳಿದುಕೊಳ್ಳಲು ಸಾಧ್ಯ. ಕೊಲ್ಕತ್ತಾಗೆ ಭೇಟಿ ನೀಡುವ ಯಾತ್ರಿಗಳಿಂದ ಹೌರಾ ಪ್ರವಾಸೋದ್ಯಮಕ್ಕೆ ಬಹಳ ಪ್ರೋತ್ಸಾಹ ದೊರಕಿದೆ. ಪಶ್ಚಿಮ ಬಂಗಾಳವನ್ನು ಅರಿಯಲು ಬಯಸುವವರು, ಅವರ ಯಾತ್ರೆಯನ್ನು ಇಲ್ಲಿಂದಲೇ ಪ್ರಾರಂಭಿಸಬಹುದು.

ಹೌರಾಗೆ ಭೇಟಿ ನೀಡಲು ಸೂಕ್ತ ಸಮಯ

ಚಳಿಗಾಲದಲ್ಲಿ ಹೌರಾಗೆ ಭೇಟಿ ನೀಡುವುದು ಉತ್ತಮ.

ಹೌರಾಗೆ ತಲುಪುವ ಬಗೆ

ಹೌರಾ ರಾಜ್ಯದ ಇತರ ನಗರಗಳೊಂದಿಗೆ ಉತ್ತಮ ರೈಲು ಹಾಗೂ ರಸ್ತೆ ಸೌಕರ್ಯಗಳನ್ನು ಹೊಂದಿದೆ. ಹೌರಾದಿಂದ ಭಾರತದ ಬೇರೆ ರಾಜ್ಯಗಳಿಗೂ ರೈಲು ಸೌಕರ್ಯವಿದೆ.

ಹೌರಾ ಪ್ರಸಿದ್ಧವಾಗಿದೆ

ಹೌರಾ ಹವಾಮಾನ

ಉತ್ತಮ ಸಮಯ ಹೌರಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹೌರಾ

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 6 ಹಾಗೂ 2, ಹೌರಾ ಮತ್ತು ರಾಜ್ಯ ಹಾಗೂ ದೇಶದ ಇತರ ಭಾಗಗಳಿಗೆ ಸಂಪರ್ಕ ಸಾಧಕಗಳಾಗಿವೆ. ಹತ್ತಿರದ ಪ್ರವಾಸಿ ತಾಣಗಳಾದ ಜಮ್ಷೆಡ್ಪುರ್, ಸಿಲಿಗುರಿ ಹಾಗೂ ಡಾರ್ಜಿಲಿಂಗ್ ಗಳಿಂದ ಹೌರಾಗೆ ರಸ್ತೆ ಸೌಕರ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹೌರಾ ರೈಲು ನಿಲ್ದಾಣದಿಂದ ಭಾರತದ ಹಾಗೂ ರಾಜ್ಯದ ಇತರ ಭಾಗಗಳಿಗೆ ನಿಯಮಿತ ರೈಲುಗಳಿವೆ. ಹೊಸ ದೆಹಲಿ ಹಾಗೂ ಮುಂಬೈ ಗೆ ಇಲ್ಲಿಂದ ನಿಯಮಿತ ರೈಲು ವ್ಯವಸ್ತೆಯಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಅಂತಾರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶ ಹಾಗೂ ವಿದೇಶಗಳಿಗೆ ಹಲವು ವಿಮಾನ ಹಾರಾಟಗಳಿವೆ. ಇಲ್ಲಿಂದ ಮುಂಬೈ ಹಾಗೂ ಡೆಲ್ಲಿಗೆ ದಿನಕ್ಕೆ ಹಲವಾರು ವಿಮಾನಗಳು ಹಾರಾಟ ನಡೆಸುತ್ತವೆ. ಈ ವಿಮಾನ ನಿಲ್ದಾಣ ಹೌರಾದಿಂದ ಕೇವಲ 34 ಕಿ. ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat