Search
  • Follow NativePlanet
Share
ಮುಖಪುಟ » ಸ್ಥಳಗಳು» ಹೋಶಂಗಾಬಾದ್

ಹೋಶಂಗಾಬಾದ್ - ಒಂದು ಸ್ತುತ್ಯರ್ಹ ಭೇಟಿ

9

ದೇಶದ ಹೃದಯಭಾಗದಲ್ಲಿರುವ ಹೋಶಂಗಾಬಾದ್ ನರ್ಮದ ನದಿಯ ಉತ್ತರ ತೀರದಲ್ಲಿದೆ. ಈ ಜಾಗವು ದೇಶ ಹಾಗೂ ಮಧ್ಯ ಪ್ರದೇಶ ರಾಜ್ಯದ ಇತಿಹಾಸದಲ್ಲಿ ಗಮನಾರ್ಹ ಸ್ಥಾನ ಹೊಂದಿದೆ. ನರ್ಮದ ನದಿ ತೀರದಲ್ಲಿರುವುದರಿಂದ ಮೊದಲಿಗೆ ನರ್ಮದಾಪುರಂ ಎಂದು ಹೆಸರಿದ್ದರೂ, ಕ್ರಮೇಣ ಇಲ್ಲಿನ ದೊರೆಯಾದ ಹೋಶಾಂಗ್ ಶಾಹ್ ಅವರಿಂದ ಹೋಶಂಗಾಬಾದ್ ಎಂಬ ಹೆಸರು ಬಂತು. ಇದರ ನಂತರ ಈ ನಗರವು ಇಲ್ಲಿನ ಸುಂದರ ಪ್ರಾಕೃತಿಕ ಹಾಗೂ ಆಧ್ಯಾತ್ಮಿಕ ತಾಣಗಳಿಂದ ಬಹಳಷ್ಟು ಯಾತ್ರಿಗಳನ್ನು ತನ್ನೆಡೆಗೆ ಸೆಳೆಯತೊಡಗಿತು.

ಹೋಶಂಗಾಬಾದ್ : ಸುತ್ತಲಿನ ಸ್ಥಳಗಳು

ಹೋಶಂಗಾಬಾದ್ ನ ಪ್ರಸಿದ್ಧ ಉತ್ಸವ ನರ್ಮದಾ ಜಯಂತಿ. ಈ ಉತ್ಸವ ಹೋಶಂಗಾಬಾದ್ ನ ಪ್ರವಾಸೋದ್ಯಮವನ್ನು ಬಹಳಷ್ಟು ವೃದ್ಧಿಸುತ್ತದೆ. ಸೇಥಾನಿ ಘಾಟ್ ಹೋಶಂಗಾಬಾದ್ ನ ಒಂದು ಗಣ್ಯ ಸ್ಥಳವಾಗಿದೆ. ಜಿಲ್ಲೆಯ ಮೂಲಕ ಹರಿಯುವ ಎರಡು ನದಿಗಳಾದ ನರ್ಮದಾ ಮತ್ತು ತವ ಗಳ ಸಂಗಮ ಬಂದ್ರಬನ್. ಹೋಶಂಗಾಬಾದ್ ನ ಜನರು ಕೃಷಿಯನ್ನು ಆಧರಿಸಿದ್ದಾರೆ. ಅತ್ಯಂತ ಹೆಚ್ಚು ಸೋಯಾ ಕಾಳು ಬೆಳೆಯುವ ನಗರವು ಇದಾಗಿದೆ. ಸತ್ಪುರ ನ್ಯಾಷನಲ್ ಪಾರ್ಕ್, ಅದಮ್‍ಗಢ್ ಬೆಟ್ಟದ ಮೇಲಿನ ಬಂಡೆಗಳ ಕೆತ್ತನೆ, ಬಂಧ್ರಭನ್ ಇತ್ಯಾದಿ ಜಾಗಗಳಲ್ಲಿ ಯಾತ್ರಿಗಳ ದಂಡೇ ಇರುತ್ತದೆ. ಸಲ್ಕಂಪುರ್, ಹೋಶಂಗ್ ಶಾಹ್ ಕೋಟೆ, ಖೇದಪತಿ ಹನುಮಾನ್ ಮಂದಿರ, ರಾಮಜಿ ಬಾಬಾ ಸಮಾಧಿ, ಹೋಶಂಗಾಬಾದ್ ನ ಇತರ ಆಕರ್ಷಣೆಗಳು.  ಮಧ್ಯಪ್ರದೇಶದ ಏಕೈಕ ಹಿಲ್ ಸ್ಟೇಷನ್ ಆದ ಪಂಚ್ಮರ್ಹಿ, ಹೋಶಂಗಾಬಾದ್ ಜಿಲ್ಲೆಯಲ್ಲಿದ್ದು, ಇದು ಶಿವಭಕ್ತರ ತೀರ್ಥಯಾತ್ರಾಸ್ಥಳವಾಗಿದೆ.

ಹೋಶಂಗಾಬಾದ್ ಗೆ ಭೇಟಿ ನೀಡುವ ಮುನ್ನ

ಹೋಶಂಗಾಬಾದ್ ನಲ್ಲಿ ವರ್ಷ ಪೂರ್ತಿ ಹಿತವಾದ ವಾತಾವರಣವಿರುತ್ತದೆ. ಈ ನಗರವು ಹತ್ತಿರದ ನಗರಗಳೊಂದಿಗೆ ರೈಲು ಹಾಗೂ ರಸ್ತೆ ಮೂಲಕ ಸಂಪರ್ಕ ಹೊಂದಿದೆ. ಎಲ್ಲಾ ವಿಷಯಗಳಲ್ಲೂ ವೈವಿಧ್ಯತೆ ಮೆರೆಯುವ ಈ ನಗರವನ್ನು, ಮಧ್ಯಪ್ರದೇಶದಲ್ಲಿ ಸುತ್ತಾಡಬಯಸುವ ಯಾತ್ರಿಗಳು ಭೇಟಿ ನೀಡಲೇಬೇಕು.

ಹೋಶಂಗಾಬಾದ್ ಪ್ರಸಿದ್ಧವಾಗಿದೆ

ಹೋಶಂಗಾಬಾದ್ ಹವಾಮಾನ

ಉತ್ತಮ ಸಮಯ ಹೋಶಂಗಾಬಾದ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹೋಶಂಗಾಬಾದ್

  • ರಸ್ತೆಯ ಮೂಲಕ
    ಹೋಶಂಗಾಬಾದ್ ಮಧ್ಯ ಪ್ರದೇಶದ ಇತರ ನಗರಗಳೊಂದಿಗೆ ಒಳ್ಳೆಯ ರಸ್ತೆ ಸೌಕರ್ಯ ಹೊಂದಿದೆ. ಇದು ಮಧ್ಯಪ್ರದೇಶದ ರಾಜಧಾನಿಯ ಹತ್ತಿರದಲ್ಲಿರುವುದರಿಂದ ಪ್ರಯಾಣ ಕಷ್ಟಕರವಲ್ಲ. ಯಾತ್ರಿಗಳು ಬಸ್ ಅಥವಾ ಟ್ಯಾಕ್ಸಿ ಮೂಲಕ ಈ ನಗರವನ್ನು ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹೋಶಂಗಾಬಾದ್ ನಲ್ಲಿ ಉತ್ತಮ ಸ್ಥಿತಿಯಲ್ಲಿರುವ ರೈಲು ನಿಲ್ಧಾಣವಿದೆ. ಹೋಶಂಗಾಬಾದ್ ರೈಲ್ವೆ ನಿಲ್ದಾಣವು ನಗರದ ಹೃದಯಭಾಗದಲ್ಲಿದ್ದು, ಇಲ್ಲಿಂದ ಮಧ್ಯ ಪ್ರದೇಶದ ಇತರ ನಗರಗಳಿಗೆ ರೈಲು ವ್ಯವಸ್ಥೆಯಿದೆ. ಇಲ್ಲಿಗೆ ರೈಲು ಮೂಲಕ ತಲುಪುವುದು ಒಳ್ಳೆಯ ಆಯ್ಕೆಯಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರಾಜ್ಯ ರಾಜಧಾನಿಯಾದ ಭೋಪಾಲ್ ನಲ್ಲಿರುವ ರಾಜ ಭೋಜ್ ವಿಮಾನ ನಿಲ್ದಾಣವು ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಭೋಪಾಲ್ ನಿಂದ ಹೋಶಂಗಾಬಾದ್ ಗೆ 70 ಕಿಲೋಮೀಟರು ದೂರವಿದೆ. ಯಾತ್ರಿಗಳು ಟ್ಯಾಕ್ಸಿ ಅಥವಾ ಬಸ್ ಮೂಲಕ ಭೋಪಾಲ್ ನಿಂದ ಹೋಶಂಗಾಬಾದ್ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu