ಗುರುದ್ವಾರಾ ಹೇಮಕುಂಡ ಸಾಹಿಬಕ್ಕೆ ಹೋಗುವಾಗ ಸಿಗುವ ಒಂದು ಪುಟ್ಟ ಗ್ರಾಮವೇ ಘಂಗಾರಿಯಾ. ಗೋವಿಂದಧಾಮ ಎಂದೂ ಕರೆಯಲ್ಪಡುವ ಹಿಮಾಲಯ ಶ್ರೇಣಿಯಲ್ಲಿರುವ ಈ ತಾಣವು ಸಮುದ್ರ ಮಟ್ಟದಿಂದ 3049 ಮೀಟರ್ ಎತ್ತರದಲ್ಲಿ ನೆಲೆಸಿದೆ.
ಹೇಮಕುಂಡ ಮತ್ತು ಹೂಗಳ ಕಣಿವೆಗೆ ಚಾರಣಕ್ಕೆ ಹೋಗುವ ಮಾರ್ಗಗಳಿಗೆ ಇದೊಂದು ಬೇಸ್ ಕ್ಯಾಂಪ್ ಆಗಿ ಸೇವೆ ಸಲ್ಲಿಸುತ್ತದೆ. ಪ್ರವಾಸಿಗರು ಘಂಗಾರಿಯಾವನ್ನು ಗೋವಿಂದಘಾಟ್ ಮೂಲಕ ಚಾರಣದ ಮಾರ್ಗವಾಗಿಯೂ ತಲುಪಬಹುದಾಗಿದೆ. ಈ ಮಾರ್ಗವು ಸ್ವಲ್ಪ ಕಷ್ಟಕರವಾಗಿದ್ದು ಹೆಸರುಗತ್ತೆಗಳ ಬಳಕೆಯನ್ನು ಮಾಡಬಹುದಾಗಿದೆ. ಘಂಗಾರಿಯಾದಲ್ಲಿ ಹಲವು ಹೋಟೆಲ್ ಹಾಗು ರೆಸ್ಟೊರೆಂಟ್ ಗಳಿದ್ದು ವಿಶ್ರಾಂತಿಯನ್ನು ಪಡೆಯಬಹುದು.