Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ಕೈಲಾಶ ಪರ್ವತ

ಕೈಲಾಶ ಪರ್ವತ, ಹಸ್ತಿನಾಪುರ

1

ಕೈಲಾಶ ಪರ್ವತವು ಹಿಮಾಲಯ ಪರ್ವತದ ಹಿಮಚ್ಚಾದಿತ ಪ್ರದೇಶದಲ್ಲಿ ನೆಲೆಗೊಂಡಿದೆ. ಇದು ಜೈನರ ಪವಿತ್ರ ಸ್ಥಳ ಎಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಪ್ರಥಮ ತೀರ್ಥಂಕರರಾದ ಭಗವಾನ ವೃಷಬ ದೇವರು ಮುಕ್ತಿಯನ್ನು ಹೊಂದಿದರು ಎಂಬ ನಂಬಿಕೆ ಇದೆ. ಆದರೆ ಎಲ್ಲ ಭಕ್ತರಿಗೂ ಮೂಲ ಕೈಲಾಶ ಪರ್ವತಕ್ಕೆ ಭೇಟಿ ಕೊಡಲು ಆಗುವುದಿಲ್ಲ. ಆದ್ದರಿಂದ ಜೈನ ಸಮುದಾಯದವರು ಹಸ್ತಿನಾಪುರದಲ್ಲಿ , ಭಗವಾನ ವೃಷಭ ದೇವರು ಜನ್ಮ ತಳೆದ ಸ್ಥಳದಲ್ಲಿ ಕೈಲಾಶ ಪರ್ವತದ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಈ ಪರ್ಯಾಯದ ಕಾರಣದಿಂದಾಗಿ ಭಕ್ತರಿಗೆ ತುಂಬಾ ಅನುಕೂಲವಾಗಿದೆ. ಇಲ್ಲಿಗೆ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ.

ಹಸ್ತಿನಾಪುರದಲ್ಲಿರುವ ಈ ನಿರ್ಮಾಣದ ಕೊಡುಗೆಯ ಮತ್ತೊಂದು ಅಂಶ ಎಂದರೆ, ಇದು ಅಕ್ಷಯ ತೃತೀಯದೊಂದಿಗೆ ಮಿಳಿತಗೊಂಡಿದೆ. ಈ ದಿನದಂದು ಶ್ರೀ ಆದಿನಾಥರು ತಮ್ಮ ಹದಿಮೂರು ತಿಂಗಳುಗಳ ಉಪವಾಸ ವೃತವನ್ನು ನಿಲ್ಲಿಸಿ, ಆಹಾರವನ್ನು ಸೇವಿಸಿದರು. ಇಲ್ಲಿ 131 ಅಡಿ ಎತ್ತರದ ಸ್ಮಾರಕವಿದೆ. ಇದು 11.25 ಅಡಿ ಎತ್ತರದ ಪದ್ಮಾಸನ ಭಂಗಿಯಲ್ಲಿರುವ ಭಗವಾನ ವೃಷಭ ದೇವರ ಮೂರ್ತಿಯನ್ನು ಹೊಂದಿದೆ.

ಹಸ್ತಿನಾಪುರದಲ್ಲಿರುವ ಕೈಲಾಶ ಪರ್ವತಗಳನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗಿದೆ. ವೃತ್ತಾಕಾರದ ರೀತಿಯಲ್ಲಿ ನಿರ್ಮಿಸಲಾಗಿರುವ 72 ದೇವಾಲಯಗಳನ್ನು ಒಳಗೊಂಡಿದೆ. ಈ ದೇವಾಲಯಗಳು ಭೂತ,ವರ್ತಮಾನ ಮತ್ತು ಭವಿಷ್ಯದ ತೀರ್ಥಂಕರರನ್ನು ಪ್ರತಿನಿಧಿಸುತ್ತವೆ. ಪ್ರತಿಯೊಂದು ವೃತ್ತಾಕಾರದ ಹಂತವು ಒಂದು ನಿರ್ದಿಷ್ಟ ಅವಧಿಯ 24 ತೀರ್ಥಂಕರಗಳನ್ನು ಪ್ರತಿನಿಧಿಸುತ್ತದೆ. ಈ ಕಟ್ಟಡದ ಒಂದು ವಿಶೇಷ ಲಕ್ಷಣ ಎಂದರೆ, ಇದರ ದ್ವಾರಗಳು, ಅಲಂಕೃತ ಛಾವಣೆಗಳು, ಕಂಬಗಳು ಮತ್ತು ಫಲಕಗಳು ಅದ್ಭುತವಾದ ನಯನ ಮನೋಹರ ಕೆತ್ತನೆಗಳನ್ನು ಹೊಂದಿವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri