Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ಅಷ್ಟ ಪಾದ

ಅಷ್ಟ ಪಾದ, ಹಸ್ತಿನಾಪುರ

1

ಅಷ್ಟಪಾದ ಎಂದರೆ ಎಂಟು  ಹೆಜ್ಜೆಗಳು ಎಂದರ್ಥ. ಜೈನ ಧರ್ಮಗ್ರಂಥಗಳ ಪ್ರಕಾರ, ಹಿಮಚ್ಛಾದಿತ ಹಿಮಾಲಯ ಶ್ರೇಣಿಯ ಒಂದು ಭಾಗದಲ್ಲಿ ಅಷ್ಟಪಾದ ಅಧ್ಯಾತ್ಮಿಕ ಕೇಂದ್ರವಿದೆ. ಇದು ಸುಮಾರು ಬದರಿನಾಥದ ಉತ್ತರ ಭಾಗದಿಂದ 168 ಮೈಲುಗಳ ದೂರದಲ್ಲಿ ನೆಲೆಗೊಂಡಿದೆ. ಇದು ಕೈಲಾಶ ಪರ್ವತಕ್ಕೆ ಪಯಣಿಸಿದಂತೆ ಆಗುತ್ತದೆ. ಇದು ಅಧ್ಬುತವಾದ ಮಾನಸ ಸರೋವರದಿಂದ ಕೇವಲ ಏಳು ಮೈಲು ದೂರದಲ್ಲಿದೆ ಎಂದು ನಂಬಲಾಗಿದೆ. ಈಗ ಮಾನಸ ಸರೋವರವು ಚೀನಿಯರ ನಿಯಂತ್ರಣದಲ್ಲಿದೆ.

ದಂತಕಥೆಗಳ ಪ್ರಕಾರ, ಪ್ರಥಮ ತೀರ್ಥಂಕರರಾದ ಭಗವಾನ್ ವೃಷಭ ದೇವರು ಈ  ಸ್ಥಳದಲ್ಲಿಯೇ ಮುಕ್ತಿಯನ್ನು ಪಡೆದರು. ಮತ್ತು ಮಹಾರಾಜ ಭರತ ಚಕ್ರವರ್ತಿಯ ಮಗನು ಅಷ್ಟಪಾದ ಪರ್ವತದ ಮೇಲೆ ಅರಮನೆಯನ್ನು ನಿರ್ಮಿಸಿ, ವಜ್ರಗಳಿಂದ ಅದನ್ನು ಅಲಂಕರಿಸಿದನು. ಮುಕ್ತಿಯನ್ನು ಹೊಂದುವ ಸಲುವಾಗಿಯೇ ಅನೇಕರು ಅಷ್ಟಪಾದಕ್ಕೆ ಭೇಟಿ ನೀಡುತ್ತಾರೆ ಎಂಬ ನಂಬಿಕೆ ಇದೆ. ಈ ನಂಬಿಕೆಯ ಕಾರಣದಿಂದಾಗಿ ಹಸ್ತಿನಾಪುರದಲ್ಲಿ ಜೈನ ಸಮುದಾಯದವರು ಅಷ್ಟಪಾದದ ಒಂದು ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ.  ಈ ಸ್ಥಳವು ಮೊದಲ ತೀರ್ಥಂಕರರು ಜನ್ಮ ತಳೆದ ಸ್ಥಳವಾಗಿದೆ.

ಈ ಭವ್ಯವಾದ ನಿರ್ಮಾಣವನ್ನು 25 ಕೋಟಿ ರೂಗಳನ್ನು ವ್ಯಯಿಸಲಾಯಿತು. ಇದರ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ಎರಡು ದಶಕಗಳ ಕಾಲ ಬೇಕಾಯಿತು. ಇದು 151 ಅಡಿ ಎತ್ತರವನ್ನು, 108 ವ್ಯಾಸವನ್ನು ಈ ಭವ್ಯವಾದ ಸ್ಥಳವು ಹೊಂದಿದೆ. ಇಲ್ಲಿ ನಾಲ್ಕು ದ್ವಾರಗಳಿವೆ. ಇವುಗಳನ್ನು ಹಾದು ಹೋಗುವ ಮೂಲಕ ಇಲ್ಲಿಗೆ ತಲುಪಬಹುದು. ಇದು ಎಂಟು ಪಾದಗಳನ್ನು ಅಥವಾ ಎಂಟು ಹೆಜ್ಜೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಪಾದವು 108 ಅಡಿ ಎತ್ತರವಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri