Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿದ್ವಾರ » ಹವಾಮಾನ

ಹರಿದ್ವಾರ ಹವಾಮಾನ

ಹರಿದ್ವಾರದಲ್ಲಿ ಬೇಸಿಗೆಯ ಋತುವಿನಲ್ಲಿ, ಬೆಚ್ಚಗಿರುತ್ತದೆ. ಹಾಗೆಯೇ ಚಳಿಗಾಲದಲ್ಲಿ ಅಧಿಕ ಚಳಿಯನ್ನು ಅನುಭವಿಸುತ್ತದೆ. ನಗರದಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆದ್ದರಿಂದ, ಪ್ರವಾಸಿಗರು ಈ ಸಮಯದಲ್ಲಿ ಹರಿದ್ವಾರಕ್ಕೆ ಭೇಟಿ ನೀಡುವುದು ಸೂಕ್ತವಲ್ಲ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಹರಿದ್ವಾರದಲ್ಲಿ ಬೇಸಿಗೆ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ  ಮೇ ತನಕ ಮುಂದುವರಿಯುತ್ತದೆ. ಈ ಸಮಯದಲ್ಲಿ ಈ ಪ್ರದೇಶದಲ್ಲಿ ಅಧಿಕ ಬಿಸಿಲಿರುತ್ತದೆ. ತಾಪಮಾನವು ಗರಿಷ್ಠ 40 ಡಿ. ಸೆ ನಿಂದ ಕನಿಷ್ಠ  15 ಡಿ. ಸೆನಷ್ಟು ದಾಖಲಾಗುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್) : ಹರಿದ್ವಾರದಲ್ಲಿ ಮಾನ್ಸೂನ್/ ಮಳೆಗಾಲ ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳಿನವರೆಗೆ ವ್ಯಾಪಿಸಿರುತ್ತದೆ. ಈ ಸಂದರ್ಭದಲ್ಲಿ  ಆರ್ದ್ರತೆಯು ಹೆಚ್ಚಿದ್ದು, ಪ್ರವಾಸಿಗರು ಈ ಅವಧಿಯಲ್ಲಿ ಈ ತಾಣಕ್ಕೆ ಭೇಟಿ ನೀಡುವುದು ಉತ್ತಮವಲ್ಲ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ಹರಿದ್ವಾರದಲ್ಲಿ ಚಳಿಗಾಲವು ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುತ್ತದೆ ಮತ್ತು ಫೆಬ್ರವರಿ ತನಕ ಮುಂದುವರಿಯುತ್ತದೆ. ಚಳಿಗಾಲದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ, 17 ಡಿ. ಸೆ ಮತ್ತು 6 ಡಿ. ಸೆ ನಷ್ಟಾಗಿರುತ್ತದೆ.