ಸುಮಾರು 150 ಕೆ. ಜಿ ತೂಕದ ಪರದ್ ಶಿವಲಿಂಗ ಅಥವಾ ಪಾದರಸ ಶಿವಲಿಂಗ, ಕನ್ಖಲ್ ನಲ್ಲಿನ ಹರಿಹರ ಆಶ್ರಮದಲ್ಲಿದೆ. ಇದು ಹರಿದ್ವಾರದಿಂದ 2 ಕಿ. ಮೀ ದೂರದಲ್ಲಿ ನೆಲೆಗೊಂಡಿದೆ ಮತ್ತು ಪ್ರತಿ ವರ್ಷ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಗುಂಪುಗುಂಪಾಗಿ ಇಲ್ಲಿಗೆ ಆಗಮಿಸುತ್ತಾರೆ. ಆಶ್ರಮವು ಸ್ಥಳದ ಒಂದು ಪ್ರಮುಖ ಆಕರ್ಷಣೆಯಾದ ರುದ್ರಾಕ್ಷಿ ಮರವನ್ನು ಹೊಂದಿದೆ.