Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿದ್ವಾರ » ಆಕರ್ಷಣೆಗಳು » ಭಾರತ್ ಮಾತಾ ಮಂದಿರ

ಭಾರತ್ ಮಾತಾ ಮಂದಿರ, ಹರಿದ್ವಾರ

3

ಮದರ್ ಇಂಡಿಯಾ ದೇವಾಲಯ ಎಂದೇ ಜನಪ್ರಿಯವಾಗಿರುವ ಭಾರತ್ ಮಾತಾ ಮಂದಿರ, ಹರಿದ್ವಾರದ ಒಂದು ಪ್ರಖ್ಯಾತ ಧಾರ್ಮಿಕ  ಸ್ಥಳವಾಗಿದೆ. ಈ ದೇವಸ್ಥಾನವು ಭಾರತ ಮಾತೆಗೆ ಮೀಸಲಾಗಿದ್ದು, ಪ್ರಸಿದ್ಧ ಧಾರ್ಮಿಕ ಗುರು, ಸ್ವಾಮಿ ಸತ್ಯಮಿತ್ರಾನಂದ ಗಿರಿ ಇದನ್ನು ನಿರ್ಮಿಸಿದ್ದಾರೆ. ಭಾರತದ ದಿವಂಗತ ಪ್ರಧಾನಿ ಇಂದಿರಾ ಗಾಂಧಿ, 1983 ರಲ್ಲಿ ಈ ದೇವಾಲಯವನ್ನು ಉದ್ಘಾಟಿಸಿದರು. ಇದು ಎಂಟು ಮಹಡಿಯ ದೇವಾಲಯವಾಗಿದ್ದು, 180 ಅಡಿ ಎತ್ತರದಲ್ಲಿದೆ.

ದೇವಾಲಯದ ಪ್ರತಿ ಮಹಡಿಯೂ ವಿವಿಧ ಹಿಂದೂ ದೇವತೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಸಮರ್ಪಿತವಾಗಿದೆ. ಇವೆಲ್ಲವುಗಳ ನಡುವೆ ಪ್ರಮುಖ ಮೊದಲ ಮಹಡಿಯಲ್ಲಿ ಭಾರತ ಮಾತಾ ವಿಗ್ರಹವನ್ನು ಸ್ಥಾಪಿಸಲಾಗಿದೆ. ಎರಡನೇ ಮಹಡಿಯಲ್ಲಿ ಭಾರತದ ನಾಯಕರ ಗೌರವಾರ್ಥ ನಿರ್ಮಿಸಿದ ಶೂರ್ ಮಂದಿರ, ಹಾಗೆಯೇ ಮೂರನೇ ಮಹಡಿಯಲ್ಲಿ ಭಾರತದ ಮಹಾನ್ ಮಹಿಳೆಗೆ ಮೀಸಲಾದ ಮಾತೃ ಮಂದಿರವನ್ನು ಕಾಣಬಹುದು. ನಾಲ್ಕನೇ ಮಹಡಿ ಮಹಾನ್ ಭಾರತೀಯ ಸಂತರಿಗೆ ಸಮರ್ಪಿತವಾಗಿದೆ ಮತ್ತು ಐದನೇ ಮಹಡಿಯಲ್ಲಿ ಧರ್ಮಗಳು, ಇತಿಹಾಸ ಮತ್ತು ಭಾರತದ ವಿವಿಧ ಭಾಗಗಳ ಸೌಂದರ್ಯವನ್ನು ಪ್ರದರ್ಶಿಸಲಾಗಿದೆ. ಶಕ್ತಿ ದೇವತೆಯ ಮತ್ತು ಭಗವಾನ್ ವಿಷ್ಣುವಿನ ವಿವಿಧ ರೂಪಗಳು ಮತ್ತು ಅವತಾರಗಳನ್ನು ಕ್ರಮವಾಗಿ ಆರನೇ ಮತ್ತು ಏಳನೇ ಮಹಡಿಯಲ್ಲಿ ಕಾಣಬಹುದು. ಎಂಟನೇ ಮಹಡಿ ಪ್ರಕೃತಿ ಉತ್ಸಾಹಿಗಳನ್ನು ಮತ್ತು ಆಧ್ಯಾತ್ಮಿಕ ಆತ್ಮಗಳಿಗೆ ಔತಣವನ್ನು ನೀಡುತ್ತವೆ. ಇದು ಭಗವಾನ್ ಶಿವನ ದೇವಾಲಯವನ್ನೂ ಹೊಂದಿದ್ದು ಈ ಮೂಲಕ ಹಿಮಾಲಯ, ಹರಿದ್ವಾರ ಮತ್ತು ಸಪ್ತ ಸರೋವರ ಒಂದು ಅಸಾಧಾರಣ ಚಿತ್ರಸದೃಶ ನೋಟಕ್ಕೆ ಪ್ರವಾಸಿಗರು ಸಾಕ್ಷಿಯಾಗಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun