Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ಆನೆಗೊಂದಿ (ಅಥವಾ ಆನೆಗುಂಡಿ)

ಆನೆಗೊಂದಿ (ಅಥವಾ ಆನೆಗುಂಡಿ), ಹಂಪಿ

1

ಆನೆಗುಂಡಿ ಹಳ್ಳಿಯು ಹಂಪಿಯಿಂದ 10 ಕಿ.ಮೀ ದೂರದಲ್ಲಿದ್ದು, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿದೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಇದರ ಅರ್ಥ ಕನ್ನಡದಲ್ಲಿ ಆನೆಗೆ ತೋಡಿದ ಗುಂಡಿ ಎಂದಾಗುತ್ತದೆ. ಈ ಪ್ರದೇಶವು ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದನ್ನು ಸುಗ್ರೀವನ (ಮಂಗಗಳ ರಾಜ) ರಾಜ್ಯ ಕಿಷ್ಕೀಂದ ಎಂದು ನಂಬಲಾಗಿದೆ. ಸಮಯಾವಕಾಶವಿದ್ದರೆ ಪ್ರವಾಸಿಗರು ಖಂಡಿತವಾಗಿಯು ಈ ಸ್ಥಳಕ್ಕೆ ಭೇಟಿ ನೀಡಿ ಅಂಜನಾದ್ರಿ ಬೆಟ್ಟವನ್ನು ನೋಡಬಹುದು. ಈ ಬೆಟ್ಟವನ್ನು ದೇವರಾದ ಹಣುಮಂತನ ಹುಟ್ಟು ಸ್ಥಳವೆಂದು ನಂಬಲಾಗಿದೆ.

ಹಂಪಿಗಿಂತಲೂ ನೆಮ್ಮದಿಯಾದಂಥ ವಾತಾವರಣವನ್ನು ಆನೆಗುಂಡಿಯು ಹೊಂದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಯೋಜನೆ ಮತ್ತು ಕಿಷ್ಕೀಂದ ಟ್ರಸ್ಟ್ ಇವುಗಳು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಆದರಾತೀಥ್ಯವು ಮನಸೂರೆಗೋಳಿಸುತ್ತದೆ. ಹೊಸ ಸೇತುವೆ(ಬ್ರಿಡ್ಜ್) ಅನ್ನು ತುಂಗಭದ್ರಾ ನದಿಗೆ ಕಟ್ಟಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ, ಪ್ರವಾಸಿಗರು ಆನೆಗುಂಡಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಸದ್ಯ, ಈ ಪ್ರದೇಶವನ್ನು ಸುತ್ತು ಮಾರ್ಗದಿಂದ ತಲುಪಬಹುದಾಗಿದೆ.

ಗಗನ ಪ್ಯಾಲೇಸ್, ಪಂಪ ಸರೋವರ ಲಕ್ಷ್ಮಿದೇವಾಲಯ, ಶ್ರೀಕೄಷ್ಣದೇವರಾಯ ಸಮಾಧಿ, ಆನೆಗುಂಡಿ ಕೋಟೆಯ ಹೆಬ್ಬಾಗಿಲು ಹಾಗು ಏಳು ತಲೆಯ ಸರ್ಪ ಇವು ಆನೆಗುಂಡಿಯ ಕೆಲವು ಪ್ರಮುಖ ಆಕರ್ಷಣೆಗಳು. ಇಷ್ಟೇ ಅಲ್ಲದೆ ಪ್ರವಾಸಿಗರು ಶ್ರೀ ಗವಿ ರಂಗನಾಥ ಸ್ವಾಮಿ ದೇವಸ್ಥಾನ, ಗಣಪತಿ ದೇವಸ್ಥಾನ, ಚಿಂತಾಮಣಿ ಶಿವ ದೇವಸ್ಥಾನ, ಹುಚ್ಚೈಪ್ಪನ ಮಠ ಮತ್ತು ಜೈನ್ ದೇವಾಲಯಗಳಿಗು ಕೂಡ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu