Search
  • Follow NativePlanet
Share
ಮುಖಪುಟ » ಸ್ಥಳಗಳು » ಹಳೆಬೀಡು » ಆಕರ್ಷಣೆಗಳು » ಹೊಯ್ಸಳೇಶ್ವರ ದೇವಾಲಯ

ಹೊಯ್ಸಳೇಶ್ವರ ದೇವಾಲಯ, ಹಳೆಬೀಡು

9

ಹಳೆಬೀಡಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಶಿವನಿಗೆ ಮೀಸಲಾದ ಹೊಯ್ಸಳೇಶ್ವರ ದೇವಾಲಯಕ್ಕೆ 'ಭೇಟಿ ಮಾಡಲೇಬೇಕು'. ಈ ದೇವಾಲಯದ ನಿರ್ಮಾಣವು 12 ನೇ ಶತಮಾನದಲ್ಲಿ ಆರಂಭವಾಯಿತು, ಆದರೆ ದೆಹಲಿಯ ಸುಲ್ತಾನರ ಆಗಮನದಿಂದಾಗಿ ಮದ್ಯದಲ್ಲೇ ನಿಲ್ಲಿಸಲಾಯಿತು.

ಈ ಐತಿಹಾಸಿಕ ಪ್ರದೇಶಕ್ಕೆ ಬರುವ ಪ್ರವಾಸಿಗರು ರಚನಾ ವೇದಿಕೆಯಲ್ಲಿ ಸುಂದರವಾಗಿ ಕೆತ್ತಿದ ಶಿಲ್ಪಗಳನ್ನು ಮತ್ತು ಅದ್ಭುತ ಕಲ್ಲಿನ ಸುರುಳೀ ಅಲಂಕಾರವನ್ನು ನೋಡಬಹುದು.ಹೊಯ್ಸಳೇಶ್ವರ ದೇವಾಲಯ, ಒಂದು ನಕ್ಷತ್ರಾಕಾರದ ಸ್ಮಾರಕವಾಗಿದ್ದು, ಪರಸ್ಪರ ಹೋಲುವ ಎರಡು ದೇವಾಲಯಗಳನ್ನು ಹೊಂದಿದೆ ಆದರೆ ಎರಡೂ ವಿಭಿನ್ನ ದೇವಾಲಯಗಳಾಗಿದ್ದು ಎರಡೂ ದೇವಾಲಯಗಳು ಮಂಟಪಗಳನ್ನು ಒಳಗೊಂಡಿದೆ. ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೆಂದರೆ ಗರುಡ ಸ್ಥಂಭ ಮತ್ತು ಚಾಕುಗಳನ್ನು ಹಿಡಿದುಕೊಂಡು, ಎರಡನೇ ವೀರ ಬಲ್ಲಾಳನ ಅಂಗರಕ್ಷಕನಾದ ಕುರುವ ಲಕ್ಶ್ಮನ ಗೌರವಾರ್ಥವಾಗಿ ತಮ್ಮ ತಲೆ ಕತ್ತರಿಸಿಕೊಳ್ಳುವ ವೀರಚರಿತ್ರ್ಯ ವರ್ಣನೆಯ ಶಾಸನಗಳು. ದೇವಾಲಯದ ಗೋಡೆಗಳು ವಿವಿಧ ದೇವ, ದೇವತೆಯರುಗಳ, ನರ್ತಕಿಯರ, ಹಕ್ಕಿಗಳ ಮತ್ತು ಪ್ರಾಣಿಗಳ ಕೆತ್ತನೆಗಳಿಂದ ಅಲಂಕೃತವಾಗಿವೆ. ದೇವಾಲಯದ ಕೆಳ ಮೋಟಿಫ್ ನಲ್ಲಿ ಮಾವುತರನ್ನೊಳಗೊಂಡ 2,000 ಆನೆಗಳು ವಿಭಿನ್ನ ರೀತಿಯಲ್ಲಿ ನಿಂತಿವೆ, ಅವುಗಳೊಂದಿಗೆ ಕುದುರೆಗಳು, ಪೌರಾಣಿಕ ಸಂಕುಲ ಮತ್ತು ಹೂವಿನ ಲಕ್ಷಣಗಳೂ ಇವೆ. ದಕ್ಷಿಣ ಮತ್ತು ಪಶ್ಚಿಮ ಪ್ರವೇಶಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ದ್ವಾರಪಾಲಕರು ಇರುವರು. ಬೆಟ್ಟದ ತುದಿಯಲ್ಲಿ ಒಂದು ಅರಮನೆಯಿದ್ದು ಮತ್ತು ನಂದಿಯ ವಿಗ್ರಹ, ಶಿವನ ರಥ ,ಇವು ದೇವಾಲಯದ ಸುತ್ತಮುತ್ತಲಿನ ಇತರ ಜನಪ್ರಿಯ ಆಕರ್ಷಣೆಗಳಾಗಿವೆ. (ದಕ್ಷಿಣ ಮತ್ತು ಪಶ್ಚಿಮ ಪ್ರವೇಶ) ಇವೆರಡು ಮಾರ್ಗಗಳ ಮೂಲಕ ದೇವಾಲಯಕ್ಕೆ ಸಂಪರ್ಕವಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat