ಹಾಜಿಪುರದ ವಿರುದ್ಧ ದಿಕ್ಕಿನಲ್ಲಿ ಈ ಸೋನೆಪುರ ಇದೆ.ಪ್ರತಿವರ್ಷ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಬರುವ ಹುಣ್ಣಿಮೆ ದಿನ ಕಾರ್ತಿಕ ದಿವಸದಿಂದ 15 ದಿನ ಜಾತ್ರೆಯನ್ನು ಇಲ್ಲಿ ಆಚರಿಸಲಾಗುತ್ತದೆ. ಸೋನೆ ಪುರದ ಈ ಜಾನುವಾರು ಜಾತ್ರೆ ಏಷ್ಯಾದಲ್ಲೇ ಹೆಸರುವಾಸಿಯಾಗಿದೆ. ಇದು ಕೇವಲ ಜಾನುವಾರುಗಳಿಗೆ ಮಾತ್ರವಲ್ಲ, ಜಾನಪದ ನಾಟಕಗಳು, ಪಟ್ಟು ನೃತ್ಯಗಳು, ಸಂಗೀತ, ರಸ್ತೆ ನಾಟಕಗಳು ಮತ್ತು ಸರ್ಕಸ್ ಒಂದು ರೀತಿಯ ರೋಮಾಂಚಕ ಉತ್ಸವ ಇಲ್ಲಿ ನಡೆಸಲಾಗುತ್ತದೆ. ಕೇವಲ ಜಾನುವಾರುಗಳನ್ನು ಮಾತ್ರವಲ್ಲದೆ ವಿವಿಧ ರೀತಿಯ ಉಡುಪು,ಪೀಠೋಪಕರಣಗಳನ್ನು ಕೂಡ ಕೊಳ್ಳಬಹುದು. ರಾಜ್ಯದ ಪ್ರವಾಸಿ ಇಲಾಖೆಯು ಉತ್ತಮ ವಸತಿ ಸೌಲಭ್ಯವನ್ನು ಕೂಡ ಒದಗಿಸುತ್ತದೆ.