ಜಗತ್ತಿನ ಅತಿ ಉದ್ದ ಸೇತುವೆಗಳಲ್ಲಿ ಒಂದಾದ ಮಹಾತ್ಮಾ ಗಾಂಧಿ ಸೇತುವನ್ನು 1982 ಮೇ ಯಲ್ಲಿ ಉದ್ಘಾಟಿಸಲಾಯಿತು. ಈ ಸೇತುವೆಯನ್ನು ಗಂಗಾ ನದಿಗೆ ಕಟ್ಟಲಾಗಿದ್ದು ಇದು ಬಿಹಾರದ ಹಾಜಿಪುರದಿಂದ ಪಾಟ್ನಾ ವನ್ನು ತಲುಪಿಸುತ್ತದೆ. 48 ಕಂಬಗಳ ಆಸರೆಯನ್ನು ಪಡೆದಿರುವ ಇದು 5575 ಮೀಟರ್ ಉದ್ದವಿದೆ. ಈ ಸೇತುವೆ ಇಡೀ ಪ್ರದೇಶದ ಸಂಚಾರ ನಿಯಂತ್ರಣಕ್ಕೆ ಮತ್ತು ಸಾರಿಗೆ ಸಂಪರ್ಕಕ್ಕೆ ಉತ್ತಮ ಮಾರ್ಗವಾಗಿದೆ.