ಶಿವ ದೇವರಿಗೆ ಸಂಬಂಧಿಸಿದ ದೇವಾಲಯವಾದ ಬತೇಶ್ವರ ನಾಥ ದೇವಾಲಯ ಬಿಹಾರದಲ್ಲಿರುವ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಹಾಜಿಪುರದಿಂದ ಪೂರ್ವ ದಿಕ್ಕಿನಲ್ಲಿದೆ. ಈ ದೇವಾಲಯ ಮೊಘಲರ ಕಾಲದ್ದು ಎನ್ನಲಾಗುತ್ತದೆ. ಈ ದೇವಾಲಯವು ಸಾವಿರಾರು ವರ್ಷ ಹಳೆಯ ಆಲದ ಮರದ ಮಧ್ಯದಲ್ಲಿ ತಾನಾಗಿಯೇ ಉದ್ಭವವಾಗಿದೆ ಎನ್ನಲಾಗುತ್ತದೆ. ಪರಿಣಾಮವಾಗಿ ಇಲ್ಲಿ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಫೆಬ್ರವರಿ ತಿಂಗಳಿನಲ್ಲಿ ಇಲ್ಲಿ ವಸಂತ ಪಂಚಮಿಯನ್ನು ಆಚರಿಸಲಾಗುವುದು ಮತ್ತು ಇದನ್ನು ತಿಂಗಳು ಪೂರ್ತಿ ಜಾತ್ರೆಯ ರೀತಿ ಆಚರಿಸಿ ಮಹಾಶಿವರಾತ್ರಿಯಂದು ಪೂರ್ಣಗೊಳಿಸಲಾಗುತ್ತದೆ. ಆಧ್ಯಾತ್ಮಿಕ ನೆಮ್ಮದಿ ಮತ್ತು ಮನಸ್ಸಿನ ಶಾಂತಿಗಾಗಿ ಈ ಸ್ಥಳಕ್ಕೆ ಭೇಟಿ ನೀಡಬೇಕು.