ಹಫ್ಲೊಂಗ್ ಸರೋವರ ನಗರದ ಹೃದಯಭಾಗದಲ್ಲಿದೆ. ಹಫ್ಲೊಂಗ್ ನ ಹೆಮ್ಮೆಯಿದು. ಹಫ್ಲೊಂಗ್ ಭೇಟಿ ನೀಡಿದವರು ಯಾವ ಕಾರಣಕ್ಕೂ ಈ ಸರೋವರವನ್ನು ತಪ್ಪಿಸಿಕೊಳ್ಳಬಾರದು. ಅಸ್ಸಾಂನಲ್ಲಿರುವ ದೊಡ್ಡ ನೈಸರ್ಗಿಕ ಜಲಮೂಲವಿದು. ಹೀಗಾಗಿ ಇದರ ಸೌಂದರ್ಯದಿಂದ ಅಸ್ಸಾಂನ ಸ್ಕಾಟ್ ಲ್ಯಾಂಡ್ ಎಂಬ ಪ್ರಖ್ಯಾತಿ ಪಡೆದುಕೊಂಡಿದೆ.
ಸರೋವರ ನೋಡಲು ಬಂದವರು ದೋಣಿವಿಹಾರವನ್ನು ತಪ್ಪಿಸಿಕೊಳ್ಳಬಾರದು- ಮನಸ್ಸಿಗೆ ಮುದ ನೀಡುವ ಮೋಜಿದು. ಹಫ್ಲೊಂಗ್ ಸರೋವರದಲ್ಲಿ ದೋಣಿವಿಹಾರ ಮಾಡುವಾಗ ಪರ್ವತ ಪ್ರದೇಶಗಳ ಮನೋಹರ ದೃಶ್ಯ ಮನಸೂರೆಗೊಳ್ಳುತ್ತದೆ.
ಇಲ್ಲಿನ ಸೌಂದರ್ಯಕ್ಕೆ ಮನಸೋತವರು ಹಲವು ದಿನಗಳವರೆಗೆ ಇಲ್ಲಿಯೇ ನೆಲೆ ನಿಲ್ಲಬಹುದು.