ಫೂಲ್ ಬಾಗ್ ಇದೊಂದು ಸುಂದರ ಉದ್ಯಾನವನವಾಗಿದ್ದು ಗ್ವಾಲಿಯರ್ ರೇಲ್ವೆ ಸ್ಟೇಷನದ ತೀರ ಸನಿಹದಲ್ಲಿದೆ. ಇದನ್ನು ಮರಾಠರ ರಾಜನಾದ ಮಾಧವ ರಾವ ಸಿಂಧಿಯ ಅವರು ನಿರ್ಮಿಸಿದರು. 1922 ರಲ್ಲಿ ವೇಲ್ಸ್ ನ ರಾಜಕುಮಾರ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಈ ಉದ್ಯಾನವನ್ನು ಉದ್ಘಾಟಿಸಿದರು. ಗ್ವಾಲಿಯರ್ ಮೃಗಾಲಯ, ವಸ್ತು ಸಂಗ್ರಹಾಲಯ ಪೂಜಾ ಸ್ಥಳಗಳಾದ ಗುರುದ್ವಾರ, ದೇವಸ್ಥಾನ ಮತ್ತು ಮಸೀದಿ ಇವೆಲ್ಲವೂ ಫೂಲ್ ಬಾಗ್ ಆವರಣದಲ್ಲಿ ನೆಲೆಗೊಂಡಿವೆ.