ಕಲಾ ವಿಥಿಕಾ ಇದು ಒಂದು ವಸ್ತು ಸಂಗ್ರಹಾಲಯವಾಗಿದೆ. ಭಾರತದ ಅನೇಕ ಮಹಾನ್ ಸಂಗೀತಗಾರರ ಸಂಗೀತ ಉಪಕರಣಗಳು ಮತ್ತು ಸಂಬಂಧಪಟ್ಟ ವೈಯಕ್ತಿಕ ವಸ್ತುಗಳನ್ನು ಸಂರಕ್ಷಿಸುವ ಒಂದು ವಸ್ತುಸಂಗ್ರಹಾಲಯವಾಗಿದೆ. ಇದು ಹಲವಾರು ಭಿತ್ತಿಚಿತ್ರದ ಕಲಾ ತುಣುಕುಗಳನ್ನು ಸಹ ಸಂರಕ್ಷಿಸುತ್ತದೆ. ಗ್ವಾಲಿಯರ್ 'ಗ್ವಾಲಿಯರ್ ಘರಾನಾ' ಶೈಲಿಯು ಹುಟ್ಟಿದ ಸ್ಥಳವಾಗಿದೆ ಈ ಸ್ಥಳದಲ್ಲಿ ಮಹಾನ ಸಂಗೀತಗಾರರು ಜನಿಸಿದರು ಮತ್ತು ಕಲಾ ಪೋಷಕರಾದ ರಾಜರಿಂದ ಉತ್ತಮ ಪೋಷಣೆಯನ್ನು ಪಡೆದರು.
ಪ್ರಸಿದ್ಧ ಸಂಗೀತಗಾರ ಉಸ್ತಾದ್ ಹಫೀಜ್ ಅಲಿ ಖಾನ್ ಅವರ ಪೂರ್ವಿಕರ ಮನೆಯನ್ನು ಕೂಡ ಮಾಸ್ಟರ್ ಸರೋದ್ ಸಂಗೀತಗಾರರಾದ ಉಸ್ತಾದ್ ಅಮ್ಜದ್ ಅಲಿ ಖಾನರು ಸರೋದ್ ಘರ್ ಎಂಬ ಹೆಸರಿನ ವಸ್ತುಸಂಗ್ರಹಾಲಯನ್ನಾಗಿ ಪರಿವರ್ತಿಸಿದರು. ಕಲಾ ವಿಥಿಕಾ ಪ್ರವಾಸಿಗರಿಗಾಗಿ ನಗರದ ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಚಿತ್ರಿಸುತ್ತದೆ. ಕಲೆ ಮತ್ತು ಸಂಗೀತದ ಇತಿಹಾಸದಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರು ಕಲಾವಿಥಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿಯನ್ನು ನೀಡಲೇಬೇಕು.