ದೇವ ಖೋ ಎಂಬುದು ಅಧ್ಬುತ ಪ್ರಕೃತಿ ಸೌಂದರ್ಯವನ್ನು ಹೊಂದಿದ ಸ್ಥಳವಾಗಿದೆ. ವಿವಿಧ ವರ್ಗಗಳಿಗೆ ಸೇರಿದ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ವಾಸಸ್ಥಾನವಾಗಿದೆ. ಆದ್ದರಿಂದ ಈ ಸ್ಥಳಕ್ಕೆ ಪ್ರಾಣಿ ಮತ್ತು ಪಕ್ಷಿ ಪ್ರಿಯರು ಮೇಲಿಂದ ಮೇಲೆ ಭೇಟಿ ನೀಡಬಹುದು. ಇದರ ಹೊರತಾಗಿ ದೇವ ಖೋ ಹಳೆಯ ಶಿವನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಇದು ಸುಂದರವಾದ ದಿಣ್ಣೆಯ ಮೇಲೆ ಇದೆ. ಈ ಸ್ಥಳಕ್ಕೆ ಹೆಚ್ಚಾಗಿ ಭಕ್ತರು ಮತ್ತು ವಾಸ್ತುಶಿಲ್ಪ ಪ್ರಿಯರು ಭೇಟಿ ಕೊಡುತ್ತಾರೆ. ಇದು ನಗರದಿಂದ 16 ಕೀಲೋ ಮೀಟರ ದೂರದಲ್ಲಿದೆ. ಇದನ್ನು ಹೆಚ್ಚಾಗಿ ಶಟರಬಗ್ಸ್ ಗಳಿಗೆ ಶಿಫಾರಸ್ಸು ಮಾಡಲಾಗಿದೆ.