Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ಪ್ರಾದೇಶಿಕ ವಿಜ್ಞಾನ ಕೇಂದ್ರ

ಪ್ರಾದೇಶಿಕ ವಿಜ್ಞಾನ ಕೇಂದ್ರ, ಗುವಾಹಾಟಿ

2

ಗುವಹಾತಿಯಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಂಗ್ರಹಾಲಯವು 27 ವಿಜ್ಞಾನ ಕೇಂದ್ರಗಳಲ್ಲಿ ಒಂದಾಗಿದ್ದು, ಇದು ಭಾರತ ಸರಕಾರದ ವಿಜ್ಞಾನ ಸಂಗ್ರಹಾಲಯಗಳ ರಾಷ್ಟ್ರೀಯ ಸಮಿತಿಯಿಂದ ನಿರ್ವಹಿಸಲ್ಪಡುತ್ತಿದೆ.  ಇದು ವಿದ್ಯಾರ್ಥಿಗಳು ಮತ್ತು ಭ್ರಾತೃ ವಿಜ್ಞಾನ ಸಂಸ್ಥೆಗಳ ನಡುವೆ ಅತ್ಯಂತ ಜನಪ್ರಿಯ ತಾಣವಾಗಿದ್ದು, ಮಕ್ಕಳೊಂದಿಗೆ ಪ್ರವಾಸ ಕೈಗೊಂಡವರು ಅಗತ್ಯವಾಗಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.   ಇಲ್ಲಿ ನೀವು ಅನೇಕ ಪ್ರದರ್ಶನಗಳು, ವಿಜ್ಞಾನಕ್ಕೆ ಸಂಬಂಧಿಸಿದ ಆಟಗಳು, ಕ್ಯಾಂಪ್ ಗಳು, ಮತ್ತು ಸೆಮಿನಾರ್ ಗಳ ನೋಟವನ್ನು ಸೆರೆಹಿಡಿಯಬಹುದು.

ಈ ಕೇಂದ್ರವು ಗುವಾಹಾಟಿ ನಗರದ ಹೊರವಲಯದಲ್ಲಿರುವ ಜವಹರ್ ನಗರ್, ಖನಪರದಲ್ಲಿದ್ದು, ವಿವಿಧ ಸಾರಿಗೆ ಮಾಧ್ಯಮಗಳ ಮೂಲಕ ಇಲ್ಲಿಗೆ ತಲುಪುವುದು ಸುಲಭವಾಗಿದೆ.  ಈ ಕೇಂದ್ರವು 1994 ರಲ್ಲಿ ಆರಂಭಗೊಂಡಿದ್ದು ಅಂದಿನಿಂದ ಇಂದಿನವರೆಗೆ ಪ್ರವಾಸಿ ಸ್ಥಳಗಳ ಕೈಪಿಡಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿರುವ ಅನೇಕ ಅಪರೂಪದ ಸಲಕರಣೆಗಳು, ಯಂತ್ರಗಳು, ಮತ್ತು ದಾಖಲೆಗಳು ವಿಜ್ಞಾನವನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ನೆರವಾಗಬಲ್ಲವು.  ಈ ವಿಜ್ಞಾನ ಕೇಂದ್ರವು ಪ್ರಾಗೈತಿಹಾಸಿಕ ಉದ್ಯಾನ, 3D ವಿಜ್ಞಾನ ಚಲನಚಿತ್ರಗಳು, ದರ್ಪಣ ಜಾದೂ, ವಿಜ್ಞಾನ ಪ್ರದರ್ಶನಗಳು, ಬಟರ್ ಫ್ಲೈ ಕಾರ್ನರ್, ಡಿಜಿಟಲ್ ತಾರಾಲಯ, ಅನೇಕ ಅಕ್ವೇರಿಯಂ ಗಳನ್ನೂ ಒಳಗೊಂಡಂತೆ ಪ್ರಮುಖ ಆಕರ್ಷಣೆಗಳಿವೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed