Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ಕಾಮಾಖ್ಯ ದೇವಸ್ಥಾನ

ಕಾಮಾಖ್ಯ ದೇವಸ್ಥಾನ, ಗುವಾಹಾಟಿ

6

ನೀವು ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡದ ಹೊರತು,ಗುವಾಹಾಟಿಯ ನಿಮ್ಮ ಪ್ರವಾಸವು ಪರಿಪೂರ್ಣವೆನಿಸದು.  ಹಿಂದೂ ಧರ್ಮದ ಪ್ರಕಾರ, ಇದು 51 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಅತಿ ಪ್ರಮುಖವಾದ ಯಾತ್ರಾಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.  ನಗರದ ಹೃದಯ ಭಾಗದಿಂದ ಸುಮಾರು 7 ಕಿ. ಮೀ. ದೂರದಲ್ಲಿರುವ ನೀಲಾಚಲ ಬೆಟ್ಟಗಳ ತುದಿಯಲ್ಲಿದ್ದು, ಇಲ್ಲಿ "ಮಹಾವಿದ್ಯ" ಗಳಿಗೆ ಮೀಸಲಾಗಿರುವ 10 ಪ್ರತ್ಯೇಕ ದೇವಾಲಯಗಳಿವೆ.    ತ್ರಿಪುರಸುಂದರಿ, ಮಾತಂಗಿ, ಮತ್ತು ಕಮಲಾ ಮೂರ್ತಿಗಳು ಮುಖ್ಯ ದೇವಸ್ಥಾನದ ಒಳಗಿದ್ದರೆ, ಇತರ 7 ರೂಪಗಳು, ಮುಖ್ಯ ದೇವಸ್ಥಾನದ ಸುತ್ತಲೂ ಇರುವ ಪ್ರತ್ಯೇಕ ದೇವಾಲಯಗಳಲ್ಲಿವೆ.

ಅಂಬುಬಾಚಿ ಮೇಳವು ಕಾಮಾಖ್ಯ ದೇವಸ್ಥಾನದಲ್ಲಿ ಜರುಗುವ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿದ್ದು, ಇದು ಜೂನ್ ತಿಂಗಳ ಮಧ್ಯ ಭಾಗದಲ್ಲಿ ನಡೆಯುತ್ತದೆ.  ಈ ಹಬ್ಬವನ್ನು ದೇವಿ ಕಾಮಾಖ್ಯಳ ( ಕಾಳಿ ದೇವಿಯ ಮತ್ತೊಂದು ರೂಪ) ವಾರ್ಷಿಕ ಋತುಚಕ್ರದ ಸ್ಮರಣಾರ್ಥ ಆಚರಿಸಲಾಗುತ್ತದೆ.   ತಂತ್ರಜ್ಞ ಸಂತರು ಈ ಸಮಯದಲ್ಲಿ ದೇಶದ ನಾನಾ ಮೂಲೆಗಳಿಂದ ಈ ದೇವಸ್ಥಾನವನ್ನು ಸಂದರ್ಶಿಸುತ್ತಾರೆ.  ದುರ್ಗಾ ಪೂಜೆ ಮತ್ತು ಮನಶಾ ಪೂಜೆಗಳನ್ನೂ ಸಹ ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ.

ಪ್ರವಾಸಿಗರು ತಿಳಿದಿರಬೇಕಾದ ವಿಷಯವೇನೆಂದರೆ, ಹಿಂದೂಗಳಿಗೆ ಮಾತ್ರವೇ ಕಾಮಾಖ್ಯ ದೇವಸ್ಥಾನಕ್ಕೆ ಪ್ರವೇಶವು ಲಭ್ಯವಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri