Search
  • Follow NativePlanet
Share
ಮುಖಪುಟ » ಸ್ಥಳಗಳು» ಗುಶೈನಿ

ಗುಶೈನಿ - ಮೀನು ಹಿಡಿಯುವವರಿಗೆ ಸ್ವರ್ಗ!

7

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ತೀರ್ಥನ್ ಕಣಿವೆಯಲ್ಲಿರುವ ಗುಶೈನಿ ಒಂದು ಸುಂದರ ನಗರ. ಗುಶೈನಿ ನಗರ ಸಮುದ್ರ ಮಟ್ಟದಿಂದ ಸುಮಾರು 4500 ಅಡಿ ಎತ್ತರದಲ್ಲಿದ್ದು, ಇಲ್ಲಿ ಟ್ರೌಟ್ ಜಾತಿಯ ಮೀನುಗಳು ಅಧಿಕವಿರುವುದರಿಂದ ಇದಕ್ಕೆ ಟ್ರೌಟ್ ದೇಶ ಎಂಬ ಹೆಸರೂ ಇದೆ. ಗುಶೈನಿಯಿಂದ 20 ಕಿಲೋ ಮೀಟರ್ ದೂರದಲ್ಲಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ ಅಥವಾ ಜಿ ಎಚ್ ಎನ್ ಪಿ ಯನ್ನು 1984 ರಲ್ಲಿ ಸ್ಥಾಪಿತವಾಗಿದ್ದು, ಈ ಪ್ರದೇಶದಲ್ಲಿರುವ ಪ್ರಧಾನ ಪ್ರವಾಸಿ ತಾಣಗಳಲ್ಲೊಂದು. ಸುಮಾರು 1,171 ಸ್ಕ್ವೇರ್ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹಿಮಾಲಯನ್ ನ್ಯಾಷನಲ್ ಪಾರ್ಕ್ ನಲ್ಲಿ 30 ಜಾತಿಯ ಸಸ್ತನಿಗಳು ಮತ್ತು 300 ಕ್ಕೂ ಅಧಿಕ ಜಾತಿಯ ಪಕ್ಷಿ ಸಂಕುಲಗಳಿವೆ. ಈ ಸ್ಥಳವನ್ನು ನೋಡಲು ಬರುವ ಪ್ರವಾಸಿಗರು ಗುಶೈನಿಯಿಂದ ಸುಮಾರು 20 ಕಿಲೋ ಮೀಟರ್ ದೂರದ ಶೋಜಾ ಹಳ್ಳಿಯಲ್ಲಿಯೇ ನಿಲ್ಲಬಹುದು. ನಿಸರ್ಗದಲ್ಲಿ ನಡೆಯುವುದಕ್ಕೆ ಇಚ್ಚೆ ಪಡುವವರು ನಿಸರ್ಗದತ್ತವಾಗಿ ಬೆಳೆದ ಮರಗಳು ಮತ್ತು ಹಸಿರಿನ ನಡುವೆಯೇ ನಡೆದುಕೊಂಡು ಬಂದು ಆಸ್ವಾದಿಸುವುದು ಉತ್ತಮ.

ಖಾಸಗಿ ಕ್ಯಾಬ್ಸ್ ಅಥವಾ ಕಾರುಗಳನ್ನು ಬಾಡಿಗೆ ಪಡೆದುಕೊಂಡು ಇಲ್ಲಿಗೆ ಸುಲಭವಾಗಿ ತಲುಪಿಕೊಳ್ಳಬಹುದು. ನವದೇಹಲಿಯಿಂದ ಗುಶೈನಿಗೆ ಪ್ರಯಾಣಿಸುವುದಕ್ಕೆ ಆಚೀಚೆ 15 ತಾಸು ತಗುಲುತ್ತದೆ. ಇಲ್ಲಿನ ರಸ್ತೆಗಳು ಕಡಿದಾಗಿರುವುದರಿಂದ ಅನುಭವೀ ಡ್ರೈವರ್ ಗಳು ವಾಹನ ಚಲಾಯಿಸುವುದು ಒಳ್ಳೆಯದು. ಗುಶೈನಿಯ ರಸ್ತೆಗಳು ಕಡಿದಾಗಿದ್ದು ಇಳಿಜಾರಾಗಿರುವುದರಿಂದ ಇಲ್ಲಿಗೆ ವಾಹನ ಚಲಾಯಿಸುವುದು ಮತ್ತಷ್ಟು ಕಠಿಣ.

ಕುಲು ಮನಾಲಿ ವಿಮಾನ ನಿಲ್ದಾಣ ಅಥವಾ ಭುಂತರ್ ವಿಮಾನ ನಿಲ್ದಾಣ ಗುಶೈನಿಗೆ ಹತ್ತಿರದಲ್ಲಿರುವ ಡೊಮೆಸ್ಟಿಕ್ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣ ನವದೆಹಲಿ, ಚಂಡೀಘರ್, ಪಠಾನ್ ಕೋಟ್, ಧರ್ಮಶಾಲಾ ಮತ್ತು ಶಿಮ್ಲಾಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗುಶೈನಿಗೆ ಹತ್ತಿರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ನವ ದೆಹಲಿ.

ಚಂಡೀಘರ್ ರೈಲ್ವೇ ಸ್ಟೇಶನ್ ಹತ್ತಿರದಲ್ಲಿರುವ ರೈಲು ಸಂಪರ್ಕವಾಗಿದ್ದು ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಚಂಡೀಘಡ, ಕುಲು ಮತ್ತು ನವ ದೆಹಲಿಯಿಂದ ಸಾಮಾನ್ಯ ಬಸ್ ಸೌಕರ್ಯಗಳಿವೆ.

ಗುಶೈನಿಯಲ್ಲಿ ವರ್ಷಪೂರ್ತಿ ಸಮಶೀತೋಷ್ಣ ವಾತಾವರಣದ ಅನುಭವವಾಗುತ್ತದೆ. ಗುಶೈನಿಗೆ ಭೆಟಿ ನೀಡಲು ಪ್ರಸಕ್ತವಾದ ಕಾಲಮಾನವೆಂದರೆ ಫೇಬ್ರವರಿಯಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳು.

ಗುಶೈನಿ ಪ್ರಸಿದ್ಧವಾಗಿದೆ

ಗುಶೈನಿ ಹವಾಮಾನ

ಉತ್ತಮ ಸಮಯ ಗುಶೈನಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಗುಶೈನಿ

  • ರಸ್ತೆಯ ಮೂಲಕ
    ಖಾಸಗಿ ವಾಹನಗಳಾದ ಕಾರ್ ಅಥವಾ ಕ್ಯಾಬ್ಸ್ ಗಳನ್ನು ಬಾಡಿಗೆಗೆ ಪಡೆದು ಬರುವುದು ಒಳ್ಳೆಯದು. ದೆಹಲಿಯಿಂದ ಗುಶೈನಿಗೆ 15 ತಾಸು ತಗುಲುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜೋಗಿಂದರ್ ರೈಲ್ವೇ ಸ್ಟೇಶನ್ ಗುಶೈನಿಯಿಂದ 100 ಕಿಲೋ ಮೀಟರ್ ದೂರದಲ್ಲದೆ. ಚಂಡೀಘಡ ರೈಲ್ವೇ ನಿಲ್ದಾಣವೂ ಇಲ್ಲಿಗೆ ಹತ್ತಿರದಲ್ಲಿದ್ದು ದೇಶದ ವಿವಿಧ ನಗರಗಳಿಗೆ ಸಂಪರ್ಕ ಕೊಂಡಿಯಾಗಿದೆ. ರೈಲ್ವೇ ನಿಲ್ದಾಣದಿಂದ ಗುಶೈನಿಗೆ ಟ್ಯಾಕ್ಸಿ ಅಥವಾ ಕ್ಯಾಬ್ಸ್ ಬಾಡಿಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭುಂತರ್ ವಿಮಾನ ನಿಲ್ದಾಣ ಅಥವಾ ಕುಲು ಮನಾಲಿ ವಿಮಾನ ನಿಲ್ದಾಣ ಗುಶೈನಿಯಿಂದ 50 ಕಿಲೋ ಮೀಟರ್ ದೂರದಲ್ಲಿರುವ ಡೊಮೆಸ್ಟಿಕ್ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣ ಮುಖ್ಯ ನಗರಗಳಾದ ನವ ದೆಹಲಿ, ಪಠಾನ್ ಕೋಟ್, ಶಿಮ್ಲಾ ಮತ್ತು ಧರ್ಮಶಾಲಾಗಳನ್ನು ಸಂಪರ್ಕಿಸುತ್ತದೆ. ಗುಶೈನಿಗೆ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ದೆಹಲಿ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri