Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರ್ಗಾಂವ್ » ಆಕರ್ಷಣೆಗಳು » ಕಿಂಗ್ಡಮ್ ಆಫ್ ಡ್ರೀಮ್ಸ್ (ಕನಸುಗಳ ಸಾಮ್ರಾಜ್ಯ)

ಕಿಂಗ್ಡಮ್ ಆಫ್ ಡ್ರೀಮ್ಸ್ (ಕನಸುಗಳ ಸಾಮ್ರಾಜ್ಯ), ಗುರ್ಗಾಂವ್

20

ಕಿಂಗ್ಡಮ್ ಆಫ್ ಡ್ರೀಮ್ಸ್ ಗುರ್ಗಾಂವ್ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಇದು ಗೋಲ್ಡನ್ ಟ್ರೈಯಾಂಗಲ್ ಸಮೀಪದಲ್ಲಿದೆ. ಆದ್ದರಿಂದ ಇಲ್ಲಿಗೆ ಆಗ್ರಾ, ದೆಹಲಿ ಮತ್ತು ಜೈಪುರಗಳ ಮೂಲಕ ಸುಲಭವಾಗಿ ತಲುಪಬಹುದು.

ಇದೊಂದು ಅಸಾಧಾರಣವಾದ ಕಲಾಪ್ರಪಂಚ. ದೇಶದ ವಿವಿಧ ಭಾಗಗಳ ಕಲೆ, ಸಂಸ್ಕೃತಿ, ಆಹಾರ ಮತ್ತು ಪ್ರದರ್ಶನ ಕಲೆಗಳನ್ನು ಇಲ್ಲಿ ಕಾಣಬಹುದು. ಈ ಕಲೆಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬೆಸೆದಿರುವುದು ಇಲ್ಲಿನ ಮತ್ತೊಂದು ಆಕರ್ಷಣೆ.

ಜನವರಿ 29, 2010ರಂದು ಸ್ಥಾಪಿತವಾದ ಈ ಪ್ರದೇಶವು ಲೀಜ಼ರ್ ವ್ಯಾಲಿ ಪಾರ್ಕ್ನ ಸಮೀಪದಲ್ಲಿದೆ. ಹಲವು ಬಾಲಿವುಡ್ ತಾರೆಯರು ಕಿಂಗ್ಡಂ ಆಫ್ ಡ್ರೀಮ್ಸ್ನೊಂದಿಗೆ ನಂಟನ್ನು ಹೊಂದಿದ್ದಾರೆ. ಇದು ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಭಾರತದ ಸಂಸ್ಕೃತಿಯನ್ನು ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಕರಕುಶಲ ಕಲೆಗಳು, ಸಂಗೀತ ಕಾರ್ಯಕ್ರಮಗಳು, ನಾಟಕಗಳು, ಉತ್ಸವಗಳು, ಬೀದಿ ನೃತ್ಯಗಳು, ಪುರಾಣ ಕತೆಗಳ ಪ್ರಸ್ತುತಿ ಇನ್ನೂ ಹಲವನ್ನು ಇಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.

ನೌಟಂಕಿ ಮಹಲ್ ಮತ್ತು ಶೋಷಾ ಥಿಯೇಟರ್ನಲ್ಲಿ ವಿವಿಧ ರೀತಿಯ ಕಲೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ಕಲ್ಚರ್ ಗಲ್ಲಿಯಲ್ಲಿ ಭಾರತೀಯ ಆಹಾರ ಮತ್ತು ಕರಕುಶಲ ವಸ್ತುಗಳು ಸಿಗುತ್ತವೆ. ನೌಟಂಕಿ ಮಹಲಿನಲ್ಲಿ 835 ಮಂದಿ ಸೇರಬಹುದು. ಇಲ್ಲಿ ಬಾಲಿವುಡ್ ಸಂಗೀತ, ಪ್ರದರ್ಶನ ಮತ್ತು ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಭಾರತೀಯ ಸಿನೆಮಾದ ಅದ್ಭುತ ಪ್ರದರ್ಶವನ್ನು ಇಲ್ಲಿ ಕಾಣಬಹುದು. ಕಲ್ಪನೆ ಮತ್ತು ತಂತ್ರಜ್ಞಾನಗಳ ಮಿಶ್ರಣದಲ್ಲಿ ಅದ್ಭುತ ಮನರಂಜನೆಯನ್ನು ನೀಡಲಾಗುತ್ತದೆ.

ಇಲ್ಲಿ ಸ್ವಯಂಚಾಲಿತ ಫೈ ಬಾರ್ಗಳು, ಹೈಡ್ರಾಲಿಕ್ ಸ್ಟೇಜ್ ಮತ್ತು ಮ್ಯಾಟ್ರಿಕ್ಸ್ ಸೌಂಡ್ ಸಿಸ್ಟಂ ಇದ್ದು ಇದು ಪ್ರದರ್ಶನವನ್ನು ಜೀವನದ ಮರೆಯಲಾಗದ ಅನುಭವವಾಗಿಸುತ್ತದೆ. ನೌಟಂಕಿ ಮಹಲ್ನಲ್ಲಿರುವ ಮಹಾರಾಜ ಲಾಂಜ್ ವೀಕ್ಷಕರಿಗಾಗಿ ಮಾಡಿರುವ ವಿಶೇಷ ವ್ಯವಸ್ಥೆ. ಮಧ್ಯಂತರ ಸಮಯದಲ್ಲಿ ತಿಂಡಿಗಳು ಮತ್ತು ಪಾನೀಯಗಳನ್ನು ನೀಡಲಾಗುತ್ತದೆ.

ಶೋ ಷಾ ಥಿಯೇಟರಿನಲ್ಲಿ ಪುರಾಣ ಕತೆಗಳಾದ ರಾಮ ಲೀಲ ಮತ್ತು ಕೃಷ್ಣಲೀಲಗಳನ್ನು ತಂತ್ರಜ್ಞಾನದ ನೆರವಿನೊಂದಿಗೆ ಪ್ರದರ್ಶಿಸಲಾಗುತ್ತದೆ. ಅಣಕು ಮದುವೆ ಸಮಾರಂಭಗಳನ್ನು ಕೂಡ ಇಲ್ಲಿ ಆಯೋಜಿಸಲಾಗುತ್ತದೆ. ವೈಭವೋಪೇತ ವಸ್ತ್ರಾಭರಣಗಳು ಮತ್ತು ಅದ್ಭುತ ನೃತ್ಯ ಸಂಯೋಜನೆಯೊಂದಿಗೆ ಭಾರತೀಯ ಮಹಾಕಾವ್ಯಗಳನ್ನು ಇಲ್ಲಿ ಅದ್ಭುತ ರೀತಿಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಪ್ರತಿಭಾ ಶೋಧ ಕಾರ್ಯಕ್ರಮಗಳನ್ನು ಕೂಡ ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಇದು ಮುಚ್ಚಿದ ಆ್ಯಂಪಿ ಥಿಯೇಟರ್ ಇಲ್ಲಿ 350 ಮಂದಿ ಕೂರಬಹುದು.

ಕಲ್ಚರ್ ಗಲ್ಲಿಯಲ್ಲಿ ಪರ್ಯಟಕರು ಭಾರತೀಯ ಸಂಸ್ಕೃತಿ, ಆಹಾರಗಳನ್ನು ನೋಡಬಹುದು, ಆಸ್ವಾದಿಸಬಹುದು ಮತ್ತು ಕೊಳ್ಳಬಹುದು. ಗೋವಾ, ಕೇರಳ, ರಾಜಸ್ಥಾನ ಅಥವ ಪಂಜಾಬ ಪ್ರವಾಸಿಗರು ಈ ಎಲ್ಲವನ್ನೂ ಇಲ್ಲಿ ಕಾಣಬಹುದು.

ಇದು ಭಾರತದ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪರ್ಯಟಕರು ಕಲೆಗಾರರೊಂದಿಗೆ ಸಂವಾದ ನಡೆಸಬಹುದು. ಆಹಾರ ಪ್ರಿಯರು ಇಲ್ಲಿ 14 ರಾಜ್ಯಗಳ ಆಹಾರದ ಸವಿಯನ್ನು ಸವಿಯಬಹುದು. ಪ್ರತಿ ರಾಜ್ಯದ ವಾಸ್ತುಶಿಲ್ಪಕಲೆಯನ್ನು ಆಯಾ ರಾಜ್ಯದ ಸಂಸ್ಕೃತಿ ವಿಶೇಷತೆಯೊಂದಿಗೆ ಕಾಣಬಹುದಾಗಿದೆ. ಮೆಹ್ಕಾನ ಬಾರ್ ಮತ್ತು ಕೇರಳ ಬಾರ್ ಇಲ್ಲಿನ ಎರಡು ಬಾರ್ಗಳು. ಇದು ಸುಮಾರು 100,000 ಚದರಡಿ ವಿಸ್ತೀರ್ಣದ ಪ್ರದೇಶದಲ್ಲಿದೆ.

ಐಐಎಫ್ಎ ಕೆಫೆಯು ಇಲ್ಲಿದ್ದು ಸಂಗೀತ ಮತ್ತಿತರ ವಿಶೇಷ ಎಫೆಕ್ಟ್ಗಳೊಂದಿಗೆ ಸೆಳೆಯುತ್ತದೆ. ಇದು ಬಾಲಿವುಡ್ ಥೀಮ್ ಒಳಗೊಂಡಿರುವ ರೆಸ್ಟೋ-ಬಾರ್. ಇಲ್ಲಿ ಸಿನಿಮಾ ವಸ್ತ್ರಗಳು, ಪೋಸ್ಟರ್ಗಳು, ಐಐಎಫ್ಎ ಪ್ರಶಸ್ತಿಗಳು ಮತ್ತು ಬಾಲಿವುಡ್ ಮೊಮೆಂಟೋಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun