Search
  • Follow NativePlanet
Share
ಮುಖಪುಟ » ಸ್ಥಳಗಳು» ಗುಲ್ಮಾರ್ಗ್

ಗುಲ್‌ಮಾರ್ಗ್‌: ಹೂಗಳಿಂದ ಅಲಂಕೃತವಾದ ನಗರಿ ಗುಲ್‌ಮಾರ್ಗ್

54

ಸಮುದ್ರ ಮಟ್ಟದಿಂದ 2730 ಮೀಟರ್‌ ಎತ್ತರದಲ್ಲಿರುವ ಅತ್ಯಾಕರ್ಷಕ ಗಿರಿಧಾಮ ಗುಲ್‌ಮಾರ್ಗ್. ಜಮ್ಮು- ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಈ ಪ್ರದೇಶವನ್ನು ಆಂಗ್ಲರು 1927ರಲ್ಲಿ ಕಂಡು ಹಿಡಿದರು. ಗುಲ್‌ಮಾರ್ಗ್ ಶಬ್ಧದ ನಿಜರ್ಥ  "ಪುಷ್ಪಗಳಿಂದ ತುಂಬಿರುವ ಪ್ರದೇಶ (ಭಾಗ)" ಎಂದಾಗುತ್ತದೆ. ಹಿಂದು ದೇವತೆ ಗೌರಿಯಿಂದಾಗಿ ಈ ಪ್ರದೇಶಕ್ಕೆ ಹೆಸರು ಬಂದಿದೆ. ಗೌರಿಮಾರ್ಗ ಎಂದಿದ್ದ ಹೆಸರು ಕಾಲಾನಂತರದಲ್ಲಿ ಬದಲಾಗಿ ಈಗ ಗುಲ್‌ಮಾರ್ಗ್ ಆಗಿದೆ. ದೇವರಾದ ಶಿವನ ಪತ್ನಿ ಗೌರಿ ದೇವಿಯಿಂದ ಈ ಹೆಸರು ಚಾಲ್ತಿಯಲ್ಲಿತ್ತು. ಈಗಿರುವ ಹೆಸರನ್ನು ಇರಿಸಿದ್ದು ಕಾಶ್ಮೀರ ಅರಸರ ಕೊನೆಯ ಕುಡಿಯಾಗಿದ್ದ ರಾಜಾ ಯೂಸುಫ್‌ ಷಾ ಚಕ್‌.

ಆಕರ್ಷಕ ನೋಟ, ತಗ್ಗು ಪ್ರದೇಶ, ಸಹನೀಯ ವಾತಾವರಣ ಮನಸೂರೆಗೊಳ್ಳುತ್ತದೆ. ಪ್ರವಾಸಿಗರು ಇಲ್ಲಿ ಬಂದಾಗ, ನಿಂಗ್ಲೆ ನಾಲಾ(ನೀರಿನ ತೊರೆ) ಗೆ ಭೇಟಿ ನೀಡಲೇಬೇಕು. ಇದೊಂದು ತೊರೆಯಾಗಿದ್ದು, ಇದು ಇಲ್ಲಿನ ಅಫರ್ವತ ಹಿಮ ಶೃಂಗದ ಹಿಮ ಕರಗಿ ಸೃಷ್ಟಿಯಾಗಿದ್ದಾಗಿದೆ. ಈ ಪರ್ವತದಲ್ಲಿ ಸೃಷ್ಟಿಯಾಗಿ ಹರಿದು ಬರುವ ತೊರೆ ಮುಂದೆ ಸುಪೋರೆ ಸಮೀಪ ಝೀಲಮ್ ನದಿಯನ್ನು ಸೇರುಕೊಳ್ಳುತ್ತದೆ. ಪ್ರವಾಸಿಗರು ತೊರೆಯ ಕೊನೆಯ ಭಾಗವನ್ನು ವೀಕ್ಷಿಸಲು ಕಾಳಿಂಗ ಮಾರ್ಗದ ಸೇತುವೆ ಮಾರ್ಗವಾಗಿ ಸಾಗಬೇಕು. ಇದು ಕೂಡ ಇಲ್ಲಿನ ಇನ್ನೊಂದು ಜನಪ್ರಿಯ ತಾಣವಾಗಿದೆ. ಕಾಶ್ಮೀರ ಕಣಿವೆಯ 'ಹೊರ ವರ್ತುಲ ವಿಹಾರ' ಅತ್ಯಂತ ಪ್ರಮುಖ ಹಾಗೂ ಪ್ರವಾಸಿಗರು ಭೇಟಿ ನೀಡಲೇಬೇಕಾದ ತಾಣ ಎಂದು ಖ್ಯಾತಿಯಾಗಿದೆ. ವಿಹಾರ ಸಂದರ್ಭದಲ್ಲಿ ಪ್ರವಾಸಿಗರು ನೈಸರ್ಗಿಕ ಸೌಂದರ್ಯ ಸವಿಯುವ ಜತೆಗೆ ಜಗತ್ತಿನ ನಾಲ್ಕನೇ ಅತಿ ಎತ್ತರದವಾದ ಸ್ಥಳ ನಂಗ ಪ್ರಭಾತ್‌ ಅನ್ನೂ ವೀಕ್ಷಿಸಬಹುದು. ಇದು ಸಮುದ್ರ ಮಟ್ಟದಿಂದ 8500 ಮೀಟರ್‌ ಎತ್ತರದಲ್ಲಿದೆ.

ಸುಮಧುರವಾದ ವಾತಾವರಣ, ಅತ್ಯಾಕರ್ಷಕ ಭೂಪ್ರದೇಶ, ಉದ್ಯಾನದಲ್ಲಿ ಅರಳಿದ ಹೂಗಳು, ದಟ್ಟ ಪೈನ್‌ ಮರಗಳ ಕಾಡು ಹಾಗೂ ಅತ್ಯಾಕರ್ಷಕ ಕೆರೆಗಳು ಗುಲ್ಮಾರ್ಗ್ ನ ಪ್ರಮುಖ ಗಮನ ಸೆಳೆಯುವ ಅಂಶಗಳು. ವರ್ಷದ ಎಲ್ಲಾ ಕಾಲ ವಿಶ್ವದ ಎಲ್ಲಾ ಮೂಲೆಯಿಂದ ಪ್ರವಾಸಿಗರು ಇತ್ತ ಆಗಮಿಸುತ್ತಿರುತ್ತಾರೆ. ಹಚ್ಚ ಹಸಿರು ಪರಿಸರ ಹಾಗೂ ಇಲ್ಲಿನ ಆಕರ್ಷಕ ವಾತಾವರಣ ಇದನ್ನೊಂದು ಉತ್ತಮ ಪಿಕ್‌ನಿಕ್‌ ತಾಣ ಹಾಗೂ ಕ್ಯಾಂಪಿಂಗ್‌ ಸ್ಥಳವನ್ನಾಗಿ ರೂಪಿಸಿದೆ. ನಿಂಗ್ಲೆ ನಾಲಾ, ವೇರಿನಾಗ್‌ ಹಾಗೂ ಫಿರೋಜ್ಪುರ್ ನಾಲಾ ಈ ಭಾಗದ ಜನಪ್ರಿಯ ತೊರೆಗಳಾಗಿವೆ. ವೇರಿನಾಗ್‌ನ ಶುದ್ಧ ಹಾಗೂ ಸ್ವಚ್ಛ ನೀರು ಪವಿತ್ರವಾಗಿದ್ದು, ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಗಾಢವಾದ ನಂಬಿಕೆ ಇಲ್ಲಿನ ಜನರದ್ದು. ಈ ನೀರಿನ ಔಷಧ ಗುಣದಿಂದಾಗಿಯೇ ಅನೇಕ ಭಕ್ತರು ಇಲ್ಲಿಗೆ ಭೇಟಿಕೊಡುತ್ತಾರೆ. ಭೌಗೋಳಿಕ ಸ್ಥಿತಿಯನ್ನು ನೋಡಿಕೊಂಡು ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಪ್ರವಾಸಿ ತಾಣವಾಗಿ ಗುಲ್‌ಮಾರ್ಗ್ ಇತ್ತೀಚೆಗೆ ಆವಿಷ್ಕಾರವಾಗಿದೆ. ಇದು ಒಂದು ದಿನದ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ಪ್ರದೇಶ ಇದಾಗಿದೆ. ನಿಸರ್ಗ ಸೌಂದರ್ಯ ಸವಿಯುವುದು ಮಾತ್ರವಲ್ಲ, ಪ್ರವಾಸಿಗರು ಇಲ್ಲಿ ಮೀನು ಹಿಡಿಯುವುದೂ ಸೇರಿದಂತೆ ಹಲವು ವಿಧದ ಉತ್ತೇಜಕ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳಬಹುದಾಗಿದೆ. ಗುಲ್‌ಮಾರ್ಗ್ ಭಾಗದಲ್ಲಿ ನೋಡಲೇಬೇಕಾದ ಇನ್ನೊಂದು ತಾಣ ಲೀನ್‌ ಮಾರ್ಗ. ಪೈನ್‌ ಮರಗಳಿಂದ ಆವೃತ್ತವಾದ ದಟ್ಟಾರಣ್ಯದ ಪ್ರದೇಶ ಇದಾಗಿದೆ. ಸ್ಥಳ ವೀಕ್ಷಣೆ ಹಾಗೂ ಕ್ಯಾಂಪ್‌ ಹೂಡಲು ಇದು ಸೂಕ್ತ ತಾಣ.

ಆಲ್‌ಪಥೇರ್‌ ಕೆರೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತದೆ. ಇದು ಗುಲ್‌ಮಾರ್ಗ್ ದಿಂದ 13 ಕಿ.ಮೀ. ದೂರದಲ್ಲಿದೆ. ವರ್ಷದ ಬಹುತೇಕ ಸಮಯ ಇದು ಸ್ಥಿರ ಸ್ಥಿತಿಯಲ್ಲಿರುತ್ತದೆ. ಬೇಸಿಗೆಯಲ್ಲಿ ಹಾಗೂ ಜೂನ್‌ ತಿಂಗಳ ಮಧ್ಯಭಾಗದಲ್ಲಿ ಇದು ಬೆಟ್ಟದ ಕೆಳಭಾಗಕ್ಕೆ ಹರಿಯುತ್ತದೆ. ಅದೂ ಮಂಜುಗಡ್ಡೆಯ ತುಂಡುಗಳ ರೂಪದಲ್ಲಿ. ಉಳಿದ ಸಮಯ ಇಡೀ ಪರ್ವತವನ್ನು ಹಿಮ ಆವರಿಸಿಕೊಂಡಿದ್ದು, ಕೆರೆಯೂ ಘನೀಭವಿಸಿರುತ್ತದೆ. ಗೋಂಡೋಲಾ ರೈಡ್‌ ಗುಲ್‌ಮಾರ್ಗ್ ನ ಇನ್ನೊಂದು ಆಕರ್ಷಣೆ. ಇದು ಅಸಲಿಯಾಗಿ ಕೇಬಲ್‌ ಕಾರು ವ್ಯವಸ್ಥೆ ಆಗಿದೆ. ಇಲ್ಲಿ ಪ್ರವಾಸಿಗರು ಐದು ಕಿ.ಮೀ. ನಷ್ಟು ದೂರವನ್ನು ಕೇಬಲ್‌ ಕಾರು ಮೂಲಕವೇ ಸಾಗಬಹುದು. ಇದು ಗುಲ್‌ಮಾರ್ಗ್ ದಿಂದ ಕೊಂಗದೂರ್‌ಗೆ ತಲುಪುತ್ತದೆ. ಹಾಗೂ ಕೊಂಗದೂರಿನಿಂದ ಅಫರ್ವತ್‌ ಪರ್ವತ ತಲುಪುತ್ತದೆ. ಕೊಂಗದೂರಿನ ಗೋಂಡೋಲಾ ಸ್ಟೇಷನ್‌ 3099 ಮೀಟರ್‌ ಎತ್ತರದಲ್ಲಿ ಇದೆ. ಇನ್ನು ಅಫರ್ವತ್‌ವು 3979 ಮೀಟರ್‌ ಎತ್ತರದಲ್ಲಿದೆ. ಗೋಂಡೋಲಾ ರೈಡ್‌ ಸ್ಥಳ ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ.

ಇಲ್ಲಿನ ಇತರೆ ಹೆಸರಿಸಬಹುದಾದ ಪ್ರವಾಸಿ ತಾಣಗಳೆಂದರೆ ಬಾಬಾ ರಿಷಿ ಮಂದಿರ, ಫಿಶಿಂಗ್‌ ಪಾಂಡ್‌, ಬನಿಬಲ್‌ ನಾಗ್‌, ಕೋವತೂರು ನಾಗ್‌ ಹಾಗೂ ಸೋನಾಮಾರ್ಗ್. ಇವೆಲ್ಲಾ ತಾಣಗಳು ಒಂದು ದಿನದ ಪಿಕ್‌ನಿಕ್‌ ಹಾಗೂ ಕ್ಯಾಂಪ್‌ ಹೂಡಲು ಹೇಳಿ ಮಾಡಿಸಿದಂತಿವೆ. ಸೋನಾಮಾರ್ಗ್ ಕೂಡ ಚಿನ್ನದ ಬೀಡು ಎಂದು ಖ್ಯಾತಿಯಾಗಿದೆ. ಇಲ್ಲಿ ನಿಂತು ಪ್ರವಾಸಿಗರು ಹಾಗೂ ಭಕ್ತರು ಅಮರನಾಥ ಗುಹೆಯನ್ನು ವೀಕ್ಷಿಸಬಹುದು. ಇದು ಇಲ್ಲಿನ ಇನ್ನೊಂದು ಪ್ರಮುಖ ಪ್ರವಾಸಿ ತಾಣ ಕೂಡ. ಇವೆಲ್ಲವನ್ನೂ ಹೊರತುಪಡಿಸಿ ಲಡಾಖ್ ಹಾಗೂ ಜೋಜಿಲಾ ಕೂಡ ಇಲ್ಲಿಂದ ಸಮೀಪದಲ್ಲಿ ನೆಲೆಸಿವೆ. ಇಲ್ಲಿಗೆ ಶ್ರೀನಗರ-ಲೇಹ್‌ ಮಾರ್ಗವಾಗಿ ಸಾಗಬೇಕು.

ಪ್ರವಾಸಿಗರು ಗುಲ್‌ಮಾರ್ಗ್ ಗೆ ವರ್ಷದ ಯಾವುದೇ ಕಾಲದಲ್ಲೂ ಭೇಟಿ ನೀಡಬಹುದು. ಆದರೆ ಭೇಟಿಗೆ ಸಕಾಲ ಮಾರ್ಚ್ ನಿಂದ ಅಕ್ಟೋಬರ್‌ ನಡುವಿನ ಅವಧಿ ಎನ್ನಲಾಗುತ್ತದೆ. ಇಲ್ಲಿಗೆ ತಲುಪಲು ವಾಯು, ರೈಲು ಹಾಗೂ ರಸ್ತೆ ಮಾರ್ಗಗಳಿಂದ ಉತ್ತಮ ಸಂಪರ್ಕ ಇದೆ.

ಗುಲ್ಮಾರ್ಗ್ ಪ್ರಸಿದ್ಧವಾಗಿದೆ

ಗುಲ್ಮಾರ್ಗ್ ಹವಾಮಾನ

ಉತ್ತಮ ಸಮಯ ಗುಲ್ಮಾರ್ಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಗುಲ್ಮಾರ್ಗ್

  • ರಸ್ತೆಯ ಮೂಲಕ
    ಗುಲ್‌ಮಾರ್ಗ್ ಉತ್ತಮ ರಸ್ತೆ ಸಂಪರ್ಕ ಹೊಂದಿದ ನಗರ. ಜಮ್ಮು- ಕಾಶ್ಮೀರ ಮಾರ್ಗದಲ್ಲಿ ಬರುವುದರಿಂದ ಸುತ್ತಲಿನ ರಾಜ್ಯ ಗಳ ಸಂಪರ್ಕ ಹೊಂದಿದೆ. ಈ ಮಾರ್ಗವಾಗಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ನಿರಂತರವಾಗಿ ಸಂಚರಿಸುತ್ತವೆ. ಅಗತ್ಯ ಆಧರಿಸಿ ಜನ ಬರಬಹುದು. ಸ್ವಂತ ವಾಹನದಲ್ಲಿ ಬರುವವರು ಶ್ರೀನಗರ ತಲುಪಿ ಅಲ್ಲಿಂದ ಇತ್ತ ಬರಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮು ತಾವಿ ರೈಲು ನಿಲ್ದಾಣ ಗುಲ್‌ಮಾರ್ಗ್ ಗೆ ಸಮೀಪದ ರೈಲುತುದಿ. ದೇಶದ ಉತ್ತರ ಭಾಗದ ನಗರಗಳಿಂದ ಆಗಮಿಸುವ ಪ್ರವಾಸಿಗರಿಗೆ ಜಮ್ಮು ಸೂಕ್ತ ಸ್ಥಳ. ಇಲ್ಲಿಗೆ ಎಲ್ಲೆಡೆಯಿಂದ ಸಂಪರ್ಕ ಉತ್ತಮವಾಗಿದೆ. ಮುಂಬಯಿ, ಪುಣೆ, ಚಂಡಿಘಡ ಹಾಗೂ ಇತರೆ ಪ್ರಮುಖ ನಗರಗಳಿಂದ ಉತ್ತಮ ರೈಲು ಸಂಪರ್ಕ ಇಲ್ಲಿಗೆ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶ್ರೀನಗರ ವಿಮಾನ ನಿಲ್ದಾಣ ಸಮೀಪದ ನಿಲ್ದಾಣವಾಗಿದೆ. ಗುಲ್‌ಮಾರ್ಗ್ ದಿಂದ ಇದು 56 ಕಿ.ಮೀ. ದೂರದಲ್ಲಿದೆ. ಶ್ರೀನಗರ ನಿಲ್ದಾಣದಿಂದ ಪ್ರವಾಸಿಗರು ಆರಾಮವಾಗಿ ಟ್ಯಾಕ್ಸಿ, ಜೀಪ್‌ ಪಡೆದು ಗುಲ್ಮಾರ್ಗ್ ತಲುಪಬಹುದು. ಶ್ರೀನಗರ ವಿಮಾನ ನಿಲ್ದಾಣವು ಮುಂಬಯಿ, ಪುಣೆ, ಚಂಡಿಘಡ ಹಾಗೂ ಇತರೆ ಪ್ರಮುಖ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat