Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಹಾಘರ್ » ಆಕರ್ಷಣೆಗಳು » ಗೋಪಾಲಗಡ ಬೆಟ್ಟ

ಗೋಪಾಲಗಡ ಬೆಟ್ಟ, ಗುಹಾಘರ್

1

ಗೋಪಾಲಗಡ ಬೆಟ್ಟ ಅಂಜನವೇಲ್ ಗ್ರಾಮದಲ್ಲಿದೆ ಹಾಗೂ ಇದು ತನ್ನ ನಿಸರ್ಗ ಸಹಜ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಇಲ್ಲಿಯೆ ಅಂಜನವೇಲ್ ಕೋಟೆ ಇದ್ದು ಇದನ್ನು ಬಿಜಾಪುರದ ಅರಸರಿಂದ 16 ನೇಯ ಶತಮಾನದಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ. ನಂತರ ಶಿವಾಜಿಯ ಆಳ್ವಿಕೆಯ ಅವಧಿಯಲ್ಲಿ ಸುಮಾರು 1660 ರಲ್ಲಿ ಆತನ ವಶಕ್ಕೆ ಬಂದಿತು.

ಶಿವಾಜಿಯ ನಂತರ 1680 ರ ಹೊತ್ತಿಗೆ ಈ ಕೋಟೆಯನ್ನು ಸಿದ್ದಿ ಖೈರತ್ ಖಾನ್ ವಶಪಡಿಸಿಕೊಂಡನು ತದನಂತರ ತುಲೌಜಿ ಆಂಗ್ರೆ 1744 ರಲ್ಲಿ ತನ್ನ ಸುಪರ್ದಿಗೆ ಪಡೆದುಕೊಂಡನು. ಆದರೆ 1818 ರ ಸುಮಾರಿಗೆ ಒಮ್ಮೆ ಮರಾಠಾ ಅರಸರ ಬಲಗುಂದಲು ಆರಂಭವಾದ ನಂತರ ಇದು ಬ್ರಿಟೀಷರ ವಶಕ್ಕೆ ಬಂದಿತು ಮತ್ತು ಭಾರತ 1947 ರಲ್ಲಿ ಸ್ವತಂತ್ರವಾಗುವ ತನಕ ಬ್ರಿಟೀಷರ ಹಿಡಿತದಲ್ಲೇ ಇದ್ದಿತು.

ಈ ಕೋಟೆ ಸುಮಾರು 7 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ ಹಾಗೂ ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಕೆಳ ಭಾಗವನ್ನು ಪಾದ್ಕೋಟ್ ಎಂದು ಹಾಗೂ ಮೇಲ್ಭಾಗವನ್ನು ಬಾಲೆಕೋಟ್ ಎಂದು ಕರೆಯುತ್ತಾರೆ. ಕೋಟೆಯ ಸುತ್ತ ಶತ್ರುಗಳಿಂದ ರಕ್ಷಣೆ ಪಡೆಯಲು ಗಟ್ಟಿಯಾದ ಕಲ್ಲಿನಿಂದ ಕಟ್ಟಿದ ಎತ್ತರದ ಗೋಡೆಯಿದೆ.

ಬೆಟ್ಟದ ತುದಿಯಲ್ಲಿ ಕೋಟೆ ಇರುವ ಕಾರಣ ಚಾರಣಿಗರಿಗೆ ಸಾಕಷ್ಟು ಅವಕಾಶ ಕಲ್ಪಿಸುತ್ತದೆ. ಸಾಹಸಿ ಹಾಗೂ ಉತ್ಸಾಹಿ ಚಾರಣಿಗರಿಗೆ ನಿಸರ್ಗದ ರಮಣೀಯ ಸೌಂದರ್ಯದ ನಡುವೆ ಬೆಟ್ಟ ಹತ್ತಲು ಇದೊಂದು ಸುಂದರವಾದ ತಾಣವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat