ಮಕ್ಕಳಿಂದ ಹಿಡಿದು ವೃದ್ಧರವರೆಗೆ ಖಗೋಳದ ಕುರಿತ ವಿಸ್ಮಯಗಳನ್ನು ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ನೀಡುವ ಸುಂದರ ತಾರಾಲಯವೊಂದು ನಗರದಲ್ಲಿದೆ. ವೀರ್ ಬಹಾದುರ್ ಸಿಂಗ್ ಪ್ಲಾನೆಟೇರಿಯಂ ಎಂಬ ಹೆಸರಿನ ಈ ತಾರಾಲಯಕ್ಕೆ ದೇಶದ ವಿವಿಧ ಪ್ರದೇಶಗಳಿಂದ ಆಸಕ್ತರು ಹಾಗೂ ಶಾಲಾ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಸೋಮವಾರದ ಹೊರತು ವಾರದ ಎಲ್ಲಾ ದಿನಗಳಲ್ಲಿ ಸುಮಾರು ಮುಕ್ಕಾಲು ಘಂಟೆಯ ಅವಧಿಯ ಹಲವು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಮೂರು ವರ್ಷ ಮೇಲ್ಪಟ್ಟವರಿಗೆ ಇಪ್ಪತ್ತೈದು ರೂಪಾಯಿಗಳ ಪ್ರವೇಶಧನವಿದ್ದರೆ ಅಂಗವಿಕಲರಿಗೆ ಉಚಿತ ಪ್ರವೇಶದ ಅವಕಾಶ ನೀಡಲಾಗಿದೆ.