ನೈಸರ್ಗಿಕ ವಿಧಾನಗಳಿಂದ ಆರೋಗ್ಯವನ್ನು ವೃದ್ಧಿಸುವ ಹಾಗೂ ಚಿಕಿತ್ಸೆ ನೀಡುವ ಆರೋಗ್ಯ ಮಂದಿರ ನಗರ ದೇವಾಲಯದೊಂದಿಗೆ ಒಂದು ಆಸ್ಪತ್ರೆಯೂ ಆಗಿದೆ. ನೈಸರ್ಗಿಕ ವಿಧಾನಗಳ ಹೊರತಾಗಿ ಆಧ್ಯಾತ್ಮಿಕ, ಯೋಗಾಭ್ಯಾಸಗಳ ಮೂಲಕವೂ ಹಲವು ಚಿಕಿತ್ಸೆಗಳನ್ನು ಇಲ್ಲಿ ನೀಡಲಾಗುತ್ತದೆ. ವರ್ಷವಿಡೀ ನಡೆಯುವ ಹತ್ತು ದಿನಗಳ ಕಾರ್ಯಾಗಾರ ಅತ್ಯಂತ ಜನಪ್ರಿಯವಾಗಿದ್ದು ದೇಶವಿದೇಶಗಳಿಂದ ಜನರು ಆಗಮಿಸುತ್ತಾರೆ. ಈ ಆರೋಗ್ಯಮಂದಿರ ನಗರದ ಕೇಂದ್ರಭಾಗದಲ್ಲಿದ್ದು ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ.