Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಪಾಲ್ಪುರ » ಹವಾಮಾನ

ಗೋಪಾಲ್ಪುರ ಹವಾಮಾನ

ಗೋಪಾಲಪುರದಲ್ಲಿ  ವರ್ಷಪೂರ್ತಿ ಸೌಮ್ಯ ಮತ್ತು ಹಿತಕರವಾದ ಹವಾಮಾನ ಅಮೋಘವಾಗಿದ್ದು ,ಪ್ರವಾಸಿಗರು ಈ ಸ್ಥಳದಲ್ಲಿ  ಆಕರ್ಷಕ ಭೂದೃಶ್ಯಗಳನ್ನು ನೋಡಿ ಆನಂದಿಸಬಹುದು. ಇಲ್ಲಿ ಅನೇಕ ಕಡಿಮೆ ದರದ ಹೋಟೆಲುಗಳು ಹಾಗೆಯೇ ಐಷಾರಾಮಿ ಹೋಟೆಲ್ ಗಳು ವಸತಿಗಾಗಿ ಲಭ್ಯ. ಸಾಂಸ್ಕೃತಿಕ ಸಂಪ್ರದಾಯ ಜೊತೆಗೆ ಸ್ಥಳದ ಶ್ರೀಮಂತಿಕೆಯನ್ನು ಆನಂದಿಸುವ ಸಲುವಾಗಿ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಗೋಪಾಲಪುರಕ್ಕೆ ಭೇಟಿ ನೀಡಬಹುದು.

ಬೇಸಿಗೆಗಾಲ

ಬೇಸಿಗೆ ಸಮಯ ಮೇ ಮತ್ತು  ತಿಂಗಳುಗಳ ನಡುವೆ ಕಂಡುಬರುತ್ತದೆ. ಈ ಸಮಯದಲ್ಲಿ ತಾಪಮಾನವು 23 ಡಿಗ್ರಿ ಸೆಲ್ಷಿಯಸ್ ನಿಂದ 35 ಡಿಗ್ರಿ ಸೆಲ್ಷಿಯಸ್ ವ್ಯಾಪ್ತಿಯಲ್ಲಿ ದಾಖಲಾಗುತ್ತದೆ.  ಸಂಜೆಯ ಹೊತ್ತು ಸೌಮ್ಯ ಹೊಡೆತಗಳ ತಂಗಾಳಿಯ ಹವಾಮಾನ  ಸಾಕಷ್ಟು ಸುಂದರವಾಗಿತ್ತದೆ. ಬೇಸಿಗೆ ತಿಂಗಳುಗಳ ಅವಧಿಯಲ್ಲಿ ಸಂಜೆ ಅದರಲ್ಲೂ ವಿಶೇಷವಾಗಿ ಸಮುದ್ರತೀರದಲ್ಲಿ, ನಗರದಲ್ಲಿ ಸಂಚರಿಸಲು ಹಿತಕರವಾಗಿರುತ್ತದೆ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ವರೆಗೆ ಗೋಪಾಲಪುರ ರಲ್ಲಿ ಮಾನ್ಸೂನ್ ಸಮಯ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತ್ಯಂತ ಆಕ್ರಮಣಕಾರಿಯಾಗಿರುತ್ತದೆ ಮತ್ತು  ವರ್ಷದ ಈ ಸಮಯದಲ್ಲಿ ಸ್ಥಳದಲ್ಲಿ ಭೇಟಿ ನೀಡುವುದು ಸೂಕ್ತವಲ್ಲ.

ಚಳಿಗಾಲ

ಚಳಿಗಾಲದ ತಿಂಗಳುಗಳು ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಇರುತ್ತವೆ. ಈ ಸಮಯದಲ್ಲಿ ತಾಪಮಾನವು 16 ಡಿ.ಸೆ ನಿಂದ 27 ಡಿ. ಸೆ ದಾಖಲಾಗುತ್ತದೆ.  ಓರಿಸ್ಸಾದ ಸುಂದರ ಬೀಚ್ ಭೇಟಿಗೆ ಇದು ಉತ್ತಮ ಸಮಯವಾಗಿದೆ. ಸೂರ್ಯನ ಶಾಖ ಕಡಿಮೆಯಾಗಿ ಮತ್ತು ಹವಾಮಾನ ಶಾಂತ ಮತ್ತು ತಂಪಾಗಿರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ರಾತ್ರಿಯ ವಾತಾವರಣ ತಂಪಾಗಿರುತ್ತದೆ.