ಗೋಪಾಲ್ ಪುರ ಕಡಲ ಕಿನಾರೆ ನಿಮ್ಮ ಗೆಳೆಯರು ಮತ್ತು ಕುಟುಂಬದ ಜೊತೆಗೆ ಭೇಟಿ ನೀಡಲು ಸೂಕ್ತವಾದ ತಾಣವಾಗಿದೆ. ಇಲ್ಲಿ ನೀವು ಪ್ರಕೃತಿಯನ್ನು ಬಹಳ ಸಮೀಪದಿಂದ ಕಾಣಬಹುದಾಗಿದೆ. ಇಲ್ಲಿನ ಕಿನಾರೆಯಲ್ಲಿ ಸ್ನಾನ ಮಾಡುವಮಜವೇ ಬೇರೆ. ಈ ಕಡಲ ಕಿನಾರೆ ನೀಡುವ ಮಜವನ್ನು ನೀಡುವ ಕಡಲ ಕಿನಾರೆಗಳು ಭಾರತದಲ್ಲಿ ಹೆಚ್ಚಿಲ್ಲ. ಇಲ್ಲಿ ಮನೋರಂಜನೆಗೂ ಹಲವು ದಾರಿಗಳಿವೆ ಉದಾಹರಣೆಗೆ ಕುದುರೆ ಸವಾರಿ, ಕ್ರೂಸಿಂಗ್, ದೇಹಕ್ಕೆ ಮಸಾಜ್ ಮಾಡಿಸಿಕೊಳ್ಳುವುದು ಇತ್ಯಾದಿ. ಇಲ್ಲಿನ ಸೂರ್ಯಾಸ್ತದ ದೃಶ್ಯವನ್ನು ಅನುಭವಿಸಿದವರಿಗೆ ಬೇರೆ ಕಡೆಯ ಸೂರ್ಯಾಸ್ತ ಸಪ್ಪೆ ಎನ್ನಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಇಲ್ಲಿನ ಸಮುದ್ರದ ಅಲೆಗಳು ಒಂದು ಲಯದಲ್ಲಿ ಹೆಚ್ಚು ಕಡಿಮೆ ಆದಂತೆ ಕಾಣಿಸುತ್ತದೆ. ಈ ಅಲೆಗಳನ್ನು ಇಲ್ಲೇ ಸಿಗುವ ಎಳೆನೀರನ್ನು ಸೇವಿಸುತ್ತಾ ಅನುಭವಿಸಿದರೆ ಅದರ ಆನಂದವೇ ಬೇರೆ. ಇಲ್ಲಿ ಬಹಳ ಹಳೆಯ ಕಾಲದ ಒಂದು ದ್ವೀಪ ಸ್ತಂಭ ಇದೆ. ಈ ದ್ವೀಪ ಸ್ತಂಭ ಇಂದಿಗೂ ಬೆಳಗುತ್ತಿದ್ದು ಇಲ್ಲಿ ಸಾಗುವ ಹಡಗುಗಳಿಗೆ ದಾರಿದೀಪವಾಗಿದೆ.