Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರಿಡೀಹ್ » ಆಕರ್ಷಣೆಗಳು » ಪಾರಸ್ನಾಥ್ ಬೆಟ್ಟ

ಪಾರಸ್ನಾಥ್ ಬೆಟ್ಟ, ಗಿರಿಡೀಹ್

8

ಪಾರಸ್ನಾಥ್ ಬೆಟ್ಟ ಅಥವಾ ಶ್ರೀ ಸಮ್ಮೇತ ಶಿಖರ್ಜಿಯು ಸಮುದ್ರಮಟ್ಟದಿಂದ 4480 ಅಡಿಗಳ ಎತ್ತರದಲ್ಲಿದೆ. ಇದು ಗಿರಿಡೀಹ್ನಲ್ಲಿರುವ ಬೆಟ್ಟಗಳ ಸರಣಿಯಲ್ಲಿದೆ ಮತ್ತು 1350 ಮೀಟರ್ಸ್ ಇರುವ ಅತ್ಯಂತ ಎತ್ತರದ ಶಿಖರವಾಗಿದೆ. ಇದು ಜಾರ್ಖಂಡಿನ ಅತಿ ಎತ್ತರದ ಬೆಟ್ಟಾವಾಗಿರುವುದಲ್ಲದೆ, ಹಿಮಾಲಯದ ದಕ್ಷಿಣಭಾಗದಲ್ಲಿರುವ ಅತಿ ಎತ್ತರದ ಶಿಖರವಾಗಿಯೂ ಇದೆ. ಈ ಕ್ಷೇತ್ರವನ್ನು ಬಹಳ ಪ್ರಾಚೀನ ಜೈನ್ ದೇವಾಲಯವೆಂದು 1775 ಏ.ಡಿ. ಇಸವಿಯಲ್ಲಿ ದಾಖಲಾಗಿದೆ. ಇದು ಒಂದು ಜೈನರ ಪ್ರಮುಖ ಮತ್ತು ಪಾವನವಾದ ತೀರ್ಥಕ್ಷೇತ್ರವಾಗಿರುವ ಪಾರಸ್ನಾಥ್ ನಲ್ಲಿ 24 ತೀರ್ಥಂಕರರಲ್ಲಿ 20 ತೀರ್ಥಂಕರರು ಮೋಕ್ಷವನ್ನು ಪಡೆದಿರುತ್ತಾರೆ.

23ನೇ ತೀರ್ಥಂಕರರಾಗಿದ್ದ ಪಾರಸ್ನಾಥ್ ಅವರ ಹೆಸರನ್ನು ಈ ಬೆಟ್ಟಕ್ಕೆ ಇಡಲಾಗಿದೆ. ಪ್ರವಾಸಿಗಳು ಬೆಟ್ಟದಲ್ಲಿ ಮುಂದುವರೆದಾಗ ತೀರ್ಥಂಕರರಿಗೆ ಸಮರ್ಪಿಸಲಾಗಿರುವ ಮಂದಿರಗಳು ಅಥವಾ ಗುಮ್ಟಿಗಳು ಕಂಡು ಬರುತ್ತವೆ. ಇವುಗಳಲ್ಲಿ ಕೆಲವು 2000 ವರ್ಷಗಳಷ್ಟು ಹಳೆಯದೆಂದು ಹೇಳುತ್ತಾರೆ. ಈ ಮಂದಿರಗಳಲ್ಲಿ ಬಹಳಕಾಲದಿಂದಲೂ ಯಾರೂ ವಾಸವಾಗಿಲ್ಲದಿದ್ದರೂ ಈಗ ಕೂಡ ಆಧುನಿಕ ಮೇಲ್ನೋಟವನ್ನು ಹೊಂದಿವೆ. ಪಾರಸ್ನಾಥ್ ಬೆಟ್ಟವು ತನ್ನ ದಟ್ಟವಾದ ಅರಣ್ಯದ ಜೊತೆಯಲ್ಲಿ ಊಸ್ರಿ ಜಲಪಾತವನ್ನು ಸುತ್ತುವರೆದಿದೆ.

ಪಾರಸ್ನಾಥ್ ನಲ್ಲಿ ಹೆಚ್ಚಾಗಿ ಸಂತಾಲರು ನೆಲೆಸಿದ್ದಾರೆ.  ಅವರು ಮಾರಂಗ್ ಬುರು(Marang Buru) ಈ ಬೆಟ್ಟದ ದೇವತೆಯೆಂದು ಕರೆಯುತ್ತಾರೆ. ಏಪ್ರಿಲ್ ಮಧ್ಯಬಾಗದಲ್ಲಿ, ಅಂದರೆ ಬೈಸಾಖಿ ಮಾಸದಲ್ಲಿ ಇಲ್ಲಿನ ಜನರು ಬೇಟೆ ಹಬ್ಬವನ್ನು ಒಂದು ಹುಣ್ಣಿಮೆಯಂದು ಆಚರಿಸುತ್ತಾರೆ.   ಮಧುಬನ್ ಎಂಬ ಹೆಸರಿನ ಅರಣ್ಯವು ಈ ಬೆಟ್ಟವನ್ನು ಸುತ್ತುವರದಿದೆ. ಟ್ರೆಕ್ಕಿಂಗ್ ಮಾಡಲಿಚ್ಚಿಸುವ ಪ್ರವಾಸಿಗಳು ಮಧುಬನ್ ಅರಣ್ಯದಿಂದ ಆರಂಭಿಸಬೇಕು. ಬೆಟ್ಟವನ್ನು ಉತ್ತರ ಕಡೆಯಿಂದ ಸುಲಭವಾಗಿ ಹತ್ತಬಹುದಾಗಿದೆ.

ಟ್ರೆಕ್ ಮಾಡುವವರು ಒಟ್ಟಿನಲ್ಲಿ 27 ಕಿ.ಮೀ.ನಷ್ಟು ಟ್ರೆಕ್ ಮಾಡಬಹುದು. ಹತ್ತಲಿಕ್ಕೆ ಆಗದಿರುವ ಪ್ರವಾಸಿಗಳು "ಡೊಲಿವಾಲಾ"ಗಳ ಸಹಾಯಪಡೆಯಬಹುದು.  ಬೆಟ್ಟಹತ್ತುವವರು ಒಂದು ಟಾರ್ಚನ್ನು ಇಟ್ಟುಕೊಳ್ಳಲೇಬೇಕು. ದಾರಿಯಲ್ಲಿ ಚಹಾ, ಕಾಫೀ ಮತ್ತು ಇತರ ಚೈತನ್ಯಗೊಳಿಸುವ ಪಾನೀಯಗಳ ಅಂಗಡಿಗಳಿರುತ್ತವೆ. ಪಾರಸ್ನಾಥ್ ಬೆಟ್ಟಕ್ಕೆ ಮೊದಲು ಗೌತಂಸ್ವಾಮಿ ಬೆಟ್ಟ ಮತ್ತು ಚಂದ್ರಪ್ರಭು ಬೆಟ್ಟ ಎಂಬ ಎರಡು ಪ್ರವಾಸೀಆಕರ್ಷಣೆ ಇರುವ ಬೆಟ್ಟಗಳು. ರಾಜ್ಯ ಪ್ರವಾಸೋದ್ಯಮ ಇಲಾಖೆ ಮೂಲಕ ಪ್ಯಾರಾಗ್ಲೈಡಿಂಗ್ ಮತ್ತು ಪ್ಯಾರಾಸೈಲಿಂಗ್ ಇತರ ಸಾಹಸೀಕ್ರೀಡೆಗಳನ್ನು ಪ್ರಾರಂಭಿಸಲು ಯೋಜನೆಮಾಡಲಾಗುತ್ತಿದೆ.   

ಪಾರಸ್ನಾಥ್ ರಸ್ತೆಯಮೂಲಕ ರಾಂಚಿಯಿಂದ 190 ಕಿ.ಮೀ., ಜುಂರಿ ತಿಲೇಯ ಮತ್ತು ಹಜ಼ಾರಿಬಾಗಿಂದ 80 ಕಿ.ಮೀ., ಧನ್ಬಾದಿನಿಂದ 60 ಕಿ.ಮೀ. ಬೊಕಾರೋಯಿಂದ 40 ಕಿ.ಮೀ. ದೂರದಲ್ಲಿದೆ. ಇದು ಗ್ರಾಂಡ್ ಟ್ರಂಕ್ ಎನ್ ಹೆಚ್ 2 ರಸ್ತೆಯಲ್ಲಿರುವುದರಿಂದ ಸುಲಭವಾಗಿ ಸೇರಬಹುದಾಗಿದೆ. ನಿಮಿಯ ಘಾಟ್ ರೈಲು ನಿಲ್ದಾಣ ಆತಿ ಹತ್ತಿರವಿದ್ದರೂ ಅದು ಅಷ್ಟು ಜನಪ್ರಿಯವಾಗಿಲ್ಲ. ಹಾಗಾಗಿ ಪಾರ್ಸನಾಥ್ ನಿಲ್ದಾಣವು ಈ ಕೊರತೆಯನ್ನು ನೀಗಿಸುತ್ತದೆ.  ಇಸ್ರಿ ಬಜಾರ್ ದಕ್ಷಿಣದಿಕ್ಕಿನಲ್ಲಿರುವ ಒಂದು ಪಕ್ಕದ ಊರು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri