ವಲ್ನೇಶ್ವರ್ ಗ್ರಾಮವು ಗಣಪತಿಪುಲೆ ಪ್ರಾಂತ್ಯಕ್ಕೆ ಹತ್ತಿರದಲ್ಲಿ ನೆಲೆಸಿದೆ. ಶಾಸ್ತ್ರಿ ನದಿಯ ಉತ್ತರಕ್ಕೆ ನೆಲೆಸಿರುವ ಈ ಸುಂದರ ಗ್ರಾಮವು ತೆಂಗಿನಮರಗಳಿಂದ ಮತ್ತು ದಿಗಂತದವರೆಗು ಚಾಚಿರುವ ಸ್ವಚ್ಛ ನೀರಿನಿಂದ ಕೂಡಿದ ಸುಂದರವಾದ ಬೀಚು ಹೊಂದಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.
ಇಲ್ಲಿಗೆ ಭೇಟಿ ಕೊಡಲು ಇರುವ ಉತ್ತಮ ಸಮಯವೆಂದರೆ ಮಹಾಶಿವರಾತ್ರಿ. ಈ ಹಬ್ಬವನ್ನು ಭಕ್ತಾಧಿಗಳೆಲ್ಲರು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ಆಗ ಭಕ್ತರು ಇಲ್ಲಿಗೆ ಸಮೀಪದ ಹಳೆಯ ಶಿವಾಲಯಕ್ಕೆ ಶಿವನ ಅನುಗ್ರಹ ಪಡೆಯುವ ಸಲುವಾಗಿ ಆಗಮಿಸುತ್ತಾರೆ.