ಥಾಕುರ್ಬರಿ ದೇವಾಲಯ ಗ್ಯಾಂಗ್ಟಾಕ್ ನ ಪ್ರಮುಖ ಪುಣ್ಯಕ್ಷೇತ್ರ. ಇದು ಸಿಕ್ಕಿಂನಲ್ಲಿರುವ ಅತ್ಯಂತ ಪುರಾತನ ಹಿಂದೂ ದೇವಾಲಯ. ಇದು ಗ್ಯಾಂಗ್ಟಾಕ್ ನಗರದೊಳಗಿದ್ದು, ಇದರೊಳಗೆ ಪ್ರಮುಖ ದೇವರುಗಳ ವಿಗ್ರಹಗಳಿವೆ. ಸಿಕ್ಕಿಂನ ಚೋಗ್ಯಲ್ ದಾನವಾಗಿ ನೀಡಿದ ಭೂಮಿಯಲ್ಲಿ 1935ರಲ್ಲಿ ಥಾಕುರ್ಬರಿ ದೇವಾಲಯವನ್ನು ಕಟ್ಟಲಾಯಿತು. 1945-47ರಲ್ಲಿ ಇದನ್ನು ದೊಡ್ಡ ದೇವಸ್ಥಾನ ಕಾಂಪ್ಲೆಕ್ಸ್ ಆಗಿ ನವೀಕರಿಸಲಾಯಿತು. ಈ ಕಾಂಪ್ಲೆಕ್ಸ್ ಗೆ ಮಲ್ಟಿಪರ್ಪಸ್ ಹಾಲ್ ಮತ್ತು ಲೈಬ್ರೆರಿಯನ್ನು ಸೇರಿಸಲು ಕಳೆದ ವರ್ಷ ಮತ್ತೆ ಕೆಲಸ ಆರಂಭಿಸಲಾಗಿದೆ.