ಗ್ಯಾಂಗ್ಟಾಕ್ ನಿಂದ 14 ಕಿ.ಮೀ. ದೂರದಲ್ಲಿ ಈ ಸುಂದರ ಗಾರ್ಡನ್ ಇದೆ. ಇದು ಅರಣ್ಯ ಇಲಾಖೆಯ ಅಧೀನದಲ್ಲಿದ್ದು, ಸಮಯ ಕಳೆಯಲು ಪಿಕ್ನಿಕ್ ಗೆ ಹೋಗುವವರಿಗೆ ಇದು ಒಳ್ಳೆಯ ತಾಣ. 2008ರಲ್ಲಿ ಈ ಗಾರ್ಡನ್ ನಲ್ಲಿ ಅಂತಾರಾಷ್ಟ್ರೀಯ ಪುಷ್ಪ ಪ್ರದರ್ಶನ ನಡೆದಿತ್ತು ಮತ್ತು ಇತ್ತೀಚೆಗೆ ಅಳವಡಿಸಲಾದ ಸಂಗೀತ ಕಾರಂಜಿ ಮತ್ತು ಈಜುಕೊಳದಿಂದ ಗಾರ್ಡನ್ ಮತ್ತಷ್ಟು ಮೆರಗನ್ನು ಪಡೆದಿದೆ. ಗಾರ್ಡನ್ ನ ಆವರಣದಲ್ಲಿ 500 ಆಸನಗಳ ಕನ್ವೆನ್ಶನ್ ಸೆಂಟರ್ ನ್ನೂ ಇತ್ತೀಚೆಗೆ ಕಟ್ಟಲಾಗಿದೆ. ಪರಿಸರ ಸಹ್ಯ ವಾತಾವರಣದಲ್ಲಿ ಸಭೆ, ಸಮಾರಂಭ ಮತ್ತು ಕಾನ್ಪರೆನ್ಸ್ ನಡೆಸುವ ಉದ್ದೇಶದಿಂದ ಇದನ್ನು ಕಟ್ಟಲಾಗಿದೆ.