ಗ್ಯಾಂಗ್ಟಾಕ್ ನಿಂದ ಕೇವಲ 20 ಕಿ.ಮೀ. ದೂರದಲ್ಲಿ ಕಣ್ಮನ ಸೆಳೆಯುವ ಬಕ್ತಾಂಗ್ ಜಲಪಾತವಿದೆ. ಉತ್ತರ ಸಿಕ್ಕಿಂಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಹೋದರೆ ಈ ಜಲಪಾತ ವೀಕ್ಷಿಸಲು ಸಾಧ್ಯ. ಗ್ಯಾಂಗ್ಟಾಕ್ ಗೆ ನೀರನ ಮೂಲವಾಗಿರುವ ರಟೆ ಚು ಈ ಜಲಪಾತದ ಮೂಲವಾಗಿದೆ. ಪ್ರವಾಸಿಗಳು ಜಲಪಾತಕ್ಕೆ ರಜೆ ಸಮಯದಲ್ಲಿ ಭೇಟಿ ನೀಡಿ ಕಾಲ ಕಳೆಯಬಹುದು. ಜಲಪಾತ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಫೋಟೊಗ್ರಾಫಿಗೆ ಯೋಗ್ಯವಾಗಿದೆ.