ಇಂದ್ರೋದ ಡೈನೋಸಾರ್ ಆಂಡ್ ಫಾಸಿಲ್ ಪಾರ್ಕ್ ಅಥವಾ ಇಂದ್ರೋದ ನೇಚರ್ ಪಾರ್ಕ್, ಸಬರಮತಿ ತೀರದಲ್ಲಿದೆ. ಇದು 400 ಹೆಕ್ಟರ್ ನಷ್ಟು ವಿಸ್ತಾರವಾಗಿದೆ.ಇದನ್ನು ಜಗತ್ತಿನಲ್ಲೇ ಎರಡನೇ ದೊಡ್ಡ ಡೈನೋಸಾರ್ ಮೊಟ್ಟೆಗಳ ಸಂರಕ್ಷಣಾ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಈ ನೇಚರ್ ಪಾರ್ಕ್ ಗುಜರಾತ್ ಜೀವ ಪರಿಸ್ಥಿತಿ ಶಾಸ್ತ್ರ ಹಾಗೂ ಸಂಶೋಧನಾ ಕೇಂದ್ರ (Gujarat Ecological Education and Research, GEER) ಪ್ರಾಧಿಕಾರದಲ್ಲಿದ್ದು, ಇದು ಭಾರತದ ಏಕೈಕ ಡೈನೋಸಾರ್ ವಸ್ತು ಸಂಗ್ರಹಾಲಯವಾಗಿದೆ. 'ಭಾರತದ ಜುರಾಸಿಕ್ ಪಾರ್ಕ್' ಎಂದು ಅನಿಸಿಕೊಂಡಿರುವ ಈ ಪಾರ್ಕ್ ನಲ್ಲಿ ಮೃಗಾಲಯ, ಸಸ್ಯ ತೋಟ, ವರ್ತುಲ ರಂಗಸ್ಥಳ ಹಾಗೂ ನೀಲ ತಿಮಿಂಗಿಲ ಸೇರಿದಂತೆ ಹಲವಾರು ಸಮುದ್ರ ಸಸ್ತನಿಗಳ ಅಸ್ತಿಪಂಜರಗಳಿವೆ. ಇಲ್ಲಿ ಒಂದು ವ್ಯಾಖ್ಯಾನ ಕೇಂದ್ರವಿದೆ. ಇಲ್ಲಿ ಶಿಬಿರ ನಡೆಸಲೂ ಅವಕಾಶವಿದೆ.