Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು » ತ್ರಿಕೂಟೇಶ್ವರ ದೇವಸ್ಥಾನ ಸಂಕೀರ್ಣ

ತ್ರಿಕೂಟೇಶ್ವರ ದೇವಸ್ಥಾನ ಸಂಕೀರ್ಣ, ಗದಗ್

7

ಗದಗಿಗೆ ಹೋಗುವ ಪ್ರವಾಸಿಗರು ತ್ರಿಕೂಟೇಶ್ವರ ದೇವಸ್ಥಾನದ ಸಂಕೀರ್ಣವನ್ನು ಭೇಟಿ ಮಾಡಲೇಬೇಕು. ಈ ಆವರಣದಲ್ಲಿ ಹಲವು ದೇವಸ್ಥಾನಗಳಿವೆ. ತ್ರಿಕೂಟೇಶ್ವರ ದೇವಸ್ಥಾನ, ಸರಸ್ವತಿ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನ. ಈ ದೇವಸ್ಥಾನಗಳು ಶಿವನಿಗೆ ಅರ್ಪಿತವಾದದ್ದು. ಗದಗ್ ನಲ್ಲಿರುವ ಅತ್ಯಂತ ಪುರಾತನ ದೇವಸ್ಥಾನವಿದು. ಐತಿಹ್ಯಗಳ ಪ್ರಕಾರ, ಈ ದೇವಸ್ಥಾನ 10ನೇ ಮತ್ತು 12ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ರಾಜರ ಕಾಲದಲ್ಲಿ ನಿರ್ಮಾಣವಾಗಿತ್ತು.

ಈ ದೇವಸ್ಥಾನಗಳ ಆವರಣದಲ್ಲಿ ಒಮ್ಮೆ ಸುತ್ತು ಹಾಕಿದರೆ ಮೂರು ಶಿವಲಿಂಗಗಳನ್ನು ಕಾಣಬಹುದು. ಈ ಶಿವಲಿಂಗವು ಒಂದೇ ಕಲ್ಲಿನಲ್ಲಿ ನಿರ್ಮಾಣವಾದದ್ದು. ಈ ಮೂರೂ ಲಿಂಗಗಳನ್ನು ಒಟ್ಟಾಗಿ ತ್ರಿಕೂಟೇಶ್ವರ ಎಂದು ಕರೆಯಲಾಗಿದೆ. ಈ ಮೂರು ಲಿಂಗಗಳು ಹಿಂದೂಗಳ ಪ್ರಮುಖ ದೇವರಾದ ಬ್ರಹ್ಮ, ವಿಷ್ಣು ಮಹೇಶ್ವರರನ್ನು ಪ್ರತಿನಿಧಿಸುತ್ತದೆ. ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿ ಸುಂದರವಾಗಿ ಕೆತ್ತನೆ ಮಾಡಿದ ಮೂರ್ತಿಗಳನ್ನು ನೋಡಬಹುದು. ಇಲ್ಲಿನ ಪ್ರತಿಯೊಂದು ಕಂಬಗಳ ಮೇಲೂ ಸೂಕ್ಷ್ಮ ಚಿತ್ರಣವಿದೆ. ತ್ರಿಕೂಟೇಶ್ವರ ದೇವಸ್ಥಾನದ ಜೊತೆಗೆ ಇಲ್ಲಿ ಸರಸ್ವತಿ, ಗಾಯತ್ರಿ ಮತ್ತು ಶಾರದಾ ದೇವಿ ದೇಗುಲವೂ ಇದೆ. ಈ ದೇವಸ್ಥಾನದ ವಾಸ್ತುಶಿಲ್ಪವು ಪುರಾತನವಾದದ್ದು, ಆದರೆ ಇಲ್ಲಿನ ಮೂರ್ತಿಯ ಕೆತ್ತನೆಯು ಆಧುನಿಕ ಕಾಲದ್ದು. ಗದಗಿಗೆ ಹೋಗುತ್ತೀರಿ ಎಂದಾದರೆ ತ್ರಿಕೂಟೇಶ್ವರ ದೇವಸ್ಥಾನಗಳನ್ನು ನೋಡಲೇಬೇಕು.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed