ಲಕ್ಕುಂಡಿಯು ಗದಗ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಾಗಿದ್ದು ಕುಕ್ನುರ್ ನಿಂದ 50 ಕಿ.ಮೀ ದೂರದಲ್ಲಿದೆ. ಈ ಹಳ್ಳಿಯು ತನ್ನಲ್ಲಿರುವ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದಂತಹ ದೇವಾಲಯಗಳ ಅವಶೇಷಗಳಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿರುವ ದೇವಾಲಯಗಳಲ್ಲಿ ಇಂದಿಗೂ ಸಂರಕ್ಷಿಸಲ್ಪಟ್ಟ ಕೆಲವು ಪ್ರಮುಖ ದೇಗುಲಗಳೆಂದರೆ, ಮಲ್ಲಿಕಾರ್ಜುನ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ ಮತ್ತು ಲಕ್ಷ್ಮಿನಾರಾಯಣ ದೇವಸ್ಥಾನ.
ಲಕ್ಕುಂಡಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನವು ಬೇರೆಲ್ಲ ದೇವಸ್ಥಾನಗಳಿಗಿಂತ ಹೆಚ್ಚು ಪ್ರಸಿದ್ಧವಾಗಿದ್ದು, ದೇವಾಲಯಗಳ ಸ್ವರ್ಗವೆಂದೆ ಚಿರಪರಿಚಿತವಾಗಿದೆ. ಈ ದೇವಾಲಯದಲ್ಲಿ ಒಂದಕ್ಕೊಂದು ಅಭಿಮುಖವಾಗಿರುವ ಎರಡು ಗರ್ಭ ಭಾಗಗಳಿದ್ದು ಶಿವ ಹಾಗು ಸೂರ್ಯ ದೇವರಿಗೆ ಸಮರ್ಪಿತವಾಗಿವೆ. ಲಕ್ಕುಂಡಿಯಲ್ಲಿರುವ ದೇವಾಲಯಗಳು ಹೊಯ್ಸಳ ಮತ್ತು ಚಾಲುಕ್ಯರ ಕಾಲದ ವಾಸ್ತುಶಿಲ್ಪಕ್ಕೆ ಜೀವಂತ ಕುರುಹುಗಳಾಗಿವೆ. ಈ ಹಳ್ಳಿಯು 101 ಮೆಟ್ಟಿಲುಳ್ಳ ಗೋಡೆ ಹಾಗು ಅದ್ಭುತವಾಗಿ ಕೆತ್ತಲ್ಪಟ್ಟಿರುವ ದೇವಾಲಯಗಳಿಂದಾಗಿ ಖ್ಯಾತಿ ಪಡೆದಿದೆ.
ಗದಗ್ ನ ಆಗ್ನೇಯ ದಿಕ್ಕಿಗೆ ಕೇವಲ 11 ಕಿ.ಮೀ ದೂರದಲ್ಲಿ ಲಕ್ಕುಂಡಿಯು ನೆಲೆಸಿದ್ದು, ಪ್ರವಾಸಿಗರು ಅತ್ಯಂತ ಸುಲಭವಾಗಿ ಈ ಸ್ಥಳವನ್ನು ತಲುಪಬಹುದಾಗಿದೆ. ಗದಗ್ ನಗರದಿಂದ ಇಲ್ಲಿಗೆ ತಲುಪಲು ಟ್ಯಾಕ್ಸಿ ಅಥವಾ ರಿಕ್ಷಾಗಳು ಸದಾ ಲಭ್ಯವಿರುತ್ತವೆ.