ಕರ್ನಾಟಕದ ಗದಗ್ ಜಿಲ್ಲೆಯ ಸಣ್ಣ ಪಟ್ಟಣ ಹರ್ತಿ. ಇದು ಅಸಂಖ್ಯ ಪುರಾತನ ಮತ್ತು ಆಧುನಿಕ ದೇವಸ್ಥಾನಗಳ ತಾಣ. ಇಲ್ಲಿನ ಅತ್ಯಂತ ಪುರಾತನ ದೇವಸ್ಥಾನವೆಂದರೆ ಪಾರ್ವತಿ ಪರಮೇಶ್ವರ ದೇವಸ್ಥಾನ (ಇದನ್ನು ಶ್ರೀ ಉಮಾಮಹೇಶ್ವರ ದೇವಸ್ಥಾನ ಎಂದೂ ಕರೆಯಲಾಗುತ್ತದೆ). ಈ ದೇವಸ್ಥಾನ ನಿರ್ಮಾಣವಾಗಿದ್ದು ಚಾಲುಕ್ಯರ ಕಾಲದಲ್ಲಿ.
ಹರ್ತಿ ಹೆಚ್ಚು ಜನಪ್ರಿಯವಾಗಿದ್ದು ಶ್ರೀ ಬಸವೇಶ್ವರ ದೇವಸ್ಥಾನದಿಂದಾಗಿ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿನ ಜನರು ಜಾತ್ರೆಯ ದಿನ ದ್ಯಾಮವ್ವನನ್ನು ಪೂಜಿಸುತ್ತಾರೆ. ಜಾತ್ರೆಯ ದಿನ ಪ್ರವಾಸಿಗರು ಭೇಟಿ ನೀಡಿದರೆ ಅಲ್ಲಿನ ಸಂಪ್ರದಾಯಗಳನ್ನು ನೋಡಬಹುದು.
ಈ ಪಟ್ಟಣದಲ್ಲಿ ಸಣ್ಣದೊಂದು ಮಸೀದಿಯಿದೆ. ಇಲ್ಲಿ ಮುಸ್ಲಿಮರು ವರ್ಷದ ಕೊನೆಯ ದಿನ ಮೊಹರ್ರಂ ಅನ್ನು ಸಂಭ್ರಮದಿಂದ ಆಚರಿಸುತ್ತಾರೆ. ಎಲ್ಲಾ ಹಬ್ಬಗಳನ್ನೂ ಹಿಂದೂ ಮತ್ತು ಮುಸ್ಲಿಂರು ಒಟ್ಟಾಗಿ ಆಚರಿಸುತ್ತಾರೆ. ಹೀಗಾಗಿ ಎರಡೂ ಕೋಮಿನವರಲ್ಲಿ ಸಹೊದರ ಸಾಮರಸ್ಯವಿದೆ.