Search
  • Follow NativePlanet
Share
ಮುಖಪುಟ » ಸ್ಥಳಗಳು» ಫಿರೋಜ್ಪುರ

ಜನಪ್ರಿಯ ಐತಿಹಾಸಿಕ ತಾಣ ಫಿರೋಜ್ಪುರ

22

ಸಟ್ಲೆಜ್ ನದಿ ತಟದಲ್ಲಿರುವ ಫಿರೋಜ್ಪುರ ಪಂಜಾಬ್ ನ ಅತ್ಯಂತ ಜನಪ್ರಿಯ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ತುಘಲಕ್ ಸಾಮ್ರಾಜ್ಯದ ಸುಲ್ತಾನ ಫಿರೊಜ್ ಷಾ ತುಘಲಕ್ ಈ ನಗರವನ್ನು ನಿರ್ಮಿಸಿದ. ಈ ನಗರಕ್ಕೆ ಭಟ್ಟಿ ವಂಶದ ಫಿರೊಜ್ ಖಾನ್‍ನ ಹೆಸರನ್ನಿಡಲಾಗಿದೆ ಎಂದು ನಂಬಲಾಗುತ್ತದೆ. ಫಿರೊಜ್ಪುರದಲ್ಲಿ ಕೇವಲ ಐತಿಹಾಸಿಕ ಸ್ಮಾರಕಗಳಲ್ಲದೆ ಧಾರ್ಮಿಕ ಕೇಂದ್ರಗಳು ಮತ್ತು ನೈಸರ್ಗಿಕ ಆಕರ್ಷನೀಯ ತಾಣಗಳಿವೆ.

ಫಿರೋಜ್ಪುರ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ನಗರದೆಲ್ಲೆಡೆ ಹರಡಿರುವ ಅಗಣಿತ ಆಕರ್ಷಣೀಯ ಪ್ರವಾಸಿ ತಾಣಗಳಿಂದ ಫಿರೋಜ್ಪುರ ಪ್ರವಾಸೋದ್ಯಮ ತುಂಬಾ ಜನಪ್ರಿಯವಾಗಿದೆ. ಜೈನ ಮಂದಿರ, ಪೊಥಿಮಾಲ ಮತ್ತು ಗುರುದ್ವಾರ ಗುರುಸರ್ ಕೆಲವು ಪ್ರಮುಖ ಪ್ರವಾಸಿ ತಾಣಗಳು. ಭಾರತ-ಪಾಕಿಸ್ತಾನ ಗಡಿಯಲ್ಲಿರುವ ನಗರವು ಆಂಗ್ಲೊ-ಸಿಖ್ ಕದನ ಮತ್ತು ಬ್ರಿಟಿಷ್ ರಾಜ್ ವೇಳೆ ಮಹತ್ವದ ಪಾತ್ರ ನಿರ್ವಹಿಸಿದೆ. ಇಲ್ಲಿರುವ ಹಲವಾರು ಮ್ಯೂಸಿಯಂ ಮತ್ತು ಸ್ಮಾರಕಗಳು, ಈ ಪ್ರದೇಶದ ಇತಿಹಾಸದ ವೈಭವದ ಒಳನೋಟವನ್ನು ಒದಗಿಸುತ್ತದೆ.

ಆಂಗ್ಲೊ-ಸಿಖ್ ಯುದ್ಧ ಸ್ಮಾರಕ, ಸಾರಗರ್ಹಿ ಸ್ಮಾರಕ, ರಾಷ್ಟ್ರೀಯ ಹುತಾತ್ಮರ ಸ್ಮಾರಕ ಮತ್ತು ಬರ್ಕಿ ಸ್ಮಾರಕ ವೀಕ್ಷಿಸಲೇಬೇಕಾದ ಕೆಲವು ಪ್ರವಾಸಿ ತಾಣಗಳು. ಇದನ್ನು ಹೊರತುಪಡಿಸಿ ನಗರದ ಸಮೀಪದಲ್ಲೇ ಇರುವ ಪ್ರವಾಸಿ ತಾಣಗಳಾದ ಹರಿಕೆ ಪಕ್ಷಿಧಾಮ(55 ಕಿ.ಮೀ. ದೂರದಲ್ಲಿದೆ), ಗುರುಹರಸಾಹಿಯಲ್ಲಿರುವ ಪೊಥಿಮಾಲ(40 ಕಿ.ಮೀ. ದೂರದಲ್ಲಿದೆ) ಮತ್ತು ಫಿರೊಜ್ಪುರದಿಂದ 90 ಕಿ.ಮೀ. ದೂರದಲ್ಲಿರುವ ಫಜಿಲ್ಕದಲ್ಲಿರುವ ಹನುಮಾನ್ ಮಂದಿರಕ್ಕೆ ಪ್ರವಾಸಿಗಳು ಭೇಟಿ ನೀಡಬಹುದು.

ಫಿರೊಜ್ಪುರಕ್ಕೆ ತಲುಪುವುದು ಹೇಗೆ

ಫಿರೊಜ್ಪುರಕ್ಕೆ ತುಂಬಾ ಹತ್ತಿರದ ವಿಮಾನ ನಿಲ್ದಾಣ ಅಮೃತಸರ. ಇದು 119 ಕಿ.ಮೀ. ದೂರದಲ್ಲಿದೆ. ಪ್ರವಾಸಿಗಳು ಅಲ್ಲಿಂದ ಬಾಡಿಗೆ ಕಾರು ಅಥವಾ ಬಸ್ ಮೂಲಕ ಫಿರೊಜ್ಪುರಕ್ಕೆ ಕೇವಲ ಎರಡು ಗಂಟೆಯಲ್ಲಿ ತಲುಪಬಹುದು. ರೈಲು ಮತ್ತು ರಸ್ತೆ ಮಾರ್ಗವಾಗಿ ಭಾರತದ ವಿವಿಧ ನಗರಗಳಿಂದ ಸುಲಭವಾಗಿ ಪ್ರಯಾಣಿಸಬಹುದಾದ ಕಾರಣ ಫಿರೋಜ್ಪುರ ಪ್ರವಾಸೋದ್ಯಮಕ್ಕೆ ಬಲ ಬಂದಿದೆ.

ಫಿರೋಜ್ಪುರ ಭೇಟಿಗೆ ಸೂಕ್ತ ಸಮಯ

ಅಕ್ಟೋಬರ್ ಮತ್ತು ಡಿಸೆಂಬರ್ ಮಧ್ಯೆ ಫಿರೊಜ್ಪುರಕ್ಕೆ ಭೇಟಿ ನೀಡಲು ಸೂಕ್ತ ಸಮಯ.

ಫಿರೋಜ್ಪುರ ಪ್ರಸಿದ್ಧವಾಗಿದೆ

ಫಿರೋಜ್ಪುರ ಹವಾಮಾನ

ಉತ್ತಮ ಸಮಯ ಫಿರೋಜ್ಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಫಿರೋಜ್ಪುರ

  • ರಸ್ತೆಯ ಮೂಲಕ
    ಭಾರತದ ಪ್ರಮುಖ ನಗರಗಳಾದ ದೆಹಲಿ, ಅಮೃತಸರ ಮತ್ತು ಚಂದೀಗಢ್ ಗೆ ಫಿರೊಜ್ಪುರದಿಂದ ರಸ್ತೆ ಸಂಪರ್ಕವಿದೆ. ರಸ್ತೆಗಳು ಅತ್ಯುತ್ತಮವಾಗಿ ನಿರ್ವಹಣೆ ಮಾಡಲ್ಪಟ್ಟಿರುವ ಕಾರಣ ಕಾರು, ಬಸ್ ಅಥವಾ ಟ್ಯಾಕ್ಸಿ ಮೂಲಕ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದೇಶದ ವಿವಿಧ ಭಾಗಗಳಿಗೆ ಹಲವಾರು ರೈಲುಗಳಿರುವ ಕಾರಣ ಇಲ್ಲಿಗೆ ರೈಲಿನಲ್ಲಿ ಪ್ರಯಾಣಿಸುವುದು ಅತ್ಯಂತ ಅನುಕೂಲಕರ ಮಾರ್ಗ. ಫಿರೋಜ್ಪುರ ರೈಲು ನಿಲ್ದಾಣ ಫಿರೋಜ್ಪುರ ಕಾನ್ಟ್ಮೆಂಟ್ ಡಿವಿಷನ್ ನಲ್ಲಿದೆ. ಇಲ್ಲಿಂದ ಬಾಡಿಗೆ ವಾಹನಗಳು ಲಭ್ಯವಿರುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಫಿರೊಜ್ಪುರಕ್ಕೆ ಸಮೀಪದ ವಿಮಾನ ನಿಲ್ದಾಣ ಅಮೃತಸರ. ಇದು 119 ಕಿ.ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಬಾಡಿಗೆ ಕಾರು ಅಥವಾ ಬಸ್ ಅಥವಾ ರೈಲು ಮೂಲಕ ಫಿರೊಜ್ಪುರಕ್ಕೆ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat