ಬ್ರಾಸನ ನಬಿಯರ ಗೋರಿಗಳು ನಬಿಯರಿಗೆ ಸಮರ್ಪಿತವಾಗಿದೆ. ಇವರು ಅಲ್ಲಾರಿಗೆ ಬಹುಪ್ರಿಯರಾಗಿದ್ದರು. ಈ ಸ್ಥಳದಲ್ಲಿ ಉತ್ಖನನ ಮಾಡಿದಾಗ ಒಟ್ಟು 11 ಮಾನವ ತಲೆ ಬುರುಡೆಗಳು ಕಂಡು ಬಂದಿದ್ದವು. ಇವುಗಳನ್ನು ನಬಿಯರ ತಲೆ ಬುರುಡೆಗಳೆಂದು ನಂಬಲಾಗಿದೆ. ಉತ್ಖನನ ನಂತರ ಇಲ್ಲಿ 11 ನಬಿಯರ ಗೋರಿಗಳನ್ನು ನಿರ್ಮಿಸಲಾಗಿದೆ. ಇದನ್ನು ಎತ್ತರದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದು, ಇಲ್ಲಿನ ಸ್ಥಳಿಯರಯ ಈ ನಬಿಯರ ಗೋರಿಗಳನ್ನು ಬಹು ಭಕ್ತಿಯಿಂದ ಕಾಣುತ್ತಾರೆ. ಹೀಗಾಗಿ ಇಲ್ಲಿಯ ಸ್ಥಳಿಯರು ಮನೆಯ ಮೇಲುಗಡೆ ಅಥವಾ ಎತ್ತರದ ಪ್ರದೇಶದಲ್ಲಿ ಮಲುಗುವುದಿಲ್ಲ. (ಏಕೆಂದರೆ ನಬಿಯರ ಗೋರಿಗಳು ಎತ್ತರದ ಪ್ರದೇಶದಲ್ಲಿವೆ). ಈ ಸ್ಥಳದಲ್ಲಿಯೇ ಶೇಖ ಅಹ್ಮದ ಫಾರುಖಿ ಸಿರಹಿಂದ ಮುಝಾಧ ಅಲ್ಫಾಸಾನಿಯು ಇಲ್ಲಿನ ಸ್ಥಳೀಯರಿಗೆ ಜ್ಞಾನದ ಉಪದೇಶವನ್ನು ಮಾಡಿದನು ಎಂಬ ನಂಬಿಕೆ ಇದೆ.