ಶಾಹಗ್ರಿದ ದಿ ಮಝರ – ಇದು ಖ್ವಾಜಾ ಖಾನನಿಗೆ ಸಮರ್ಪಿತವಾದ ಗೋರಿಯಾಗಿದೆ. ಇವನು ಪ್ರಸಿದ್ಧ ವಾಸ್ತು ಶಿಲ್ಪಿ ಉಸ್ತಾದ ಸಯ್ಯದ ಖಾನರ ಪ್ರಿಯ ಶಿಷ್ಯನಾಗಿದ್ದನು. ಖ್ವಾಜಾ ಖಾನನು ತನ್ನ ಗುರುಗಳಂತೆಯೇ ವಾಸ್ತುಶಿಲ್ಪ ವಿದ್ಯೆಯಲ್ಲಿ ಪಾರಂಗತೆಯನ್ನು ಪಡೆದು ಅದ್ಭುತ ಕಟ್ಟಡಗಳನ್ನು ನಿರ್ಮಾಣ ಮಾಡಿದನು. ಈ ಸ್ಥಳವು ಸುಂದರವಾದ ವಾಸ್ತು ವಿನ್ಯಾಸ ಶೈಲಿಗೆ ಹೆಸರಾಗಿದೆ. ಈ ಅದ್ಭುತ ಶೈಲಿಯು ಈ ಸ್ಥಳದ ಪ್ರತಿಯೊಂದು ಮೂಲೆಯಲ್ಲೂ ವ್ಯಕ್ತವಾಗುತ್ತದೆ. ಕೆಲವು ವರ್ಣಚಿತ್ರಗಳು ಹಾಳಾಗಿದ್ದರೂ ಸಹ, ಮಧ್ಯಕಾಲೀನ ಯುಗಕ್ಕೆ ಸೇರಿದ ಹಲವು ಕಲಾಕೃತಿಗಳನ್ನು ಈಗಲೂ ಇಲ್ಲಿ ಕಾಣಬಹುದು. ಈ ಸ್ಥಳವು ತಾಲಾನಿಯನ ಮಕ್ಬರ ಎಂದು ಪ್ರಸಿದ್ದವಾಗಿದೆ. ಈ ಗೋರಿಯು ದೆಹಲಿಯ ದೊರೆ ಹುಮಾಯುನನ ಗೋರಿಯನ್ನು ಹೋಲುತ್ತದೆ.